ಪತ್ರಕರ್ತ ತುಳಜಣ್ಣವರ ಕೊಡುಗೆ ಶ್ಲಾಘನೀಯ : ಮುರುಘೇಂದ್ರ ಶ್ರೀ

Pratibha Boi
ಪತ್ರಕರ್ತ ತುಳಜಣ್ಣವರ ಕೊಡುಗೆ ಶ್ಲಾಘನೀಯ : ಮುರುಘೇಂದ್ರ ಶ್ರೀ
WhatsApp Group Join Now
Telegram Group Join Now
ಯರಗಟ್ಟಿ : ಶರಣ ಜೀವಿ, ಸೌಮ್ಯ ಸ್ವಭಾವದ, ಎಲ್ಲರೊಂದಿಗೂ ಒಂದಾಗುವ ಪತ್ರಕರ್ತ, ಛಾಯಾಗ್ರಾಹಕ ಲಿಂ.ಬಸವರಾಜ ತುಳಜಣ್ಣವರ ಉತ್ತಮ ರೀತಿಯಲ್ಲಿ ಬದುಕಿ, ಬಾಳಿ ಇತರರಿಗೆ ಮಾರ್ಗದರ್ಶನ ಮಾಡಿದ್ದ, ಬಹಳ ಜನರ ಪ್ರೀತಿಗೆ ಪಾತ್ರನಾಗಿದ್ದ, ಚಿಕ್ಕ ವಯಸ್ಸಿನಲ್ಲಿ ತೀರಿಹೋಗಿದ್ದು ನಮಗೆಲ್ಲ ನೋವು ತಂದಿದೆ. ತನ್ನೆಲ್ಲ ದುಃಖವನ್ನು ಮರೆಮಾಚಿ ಇತರರೊಂದಿಗೆ ನಗು ನಗುತ್ತ, ಸಲಹೆ ಸೂಚನೆಗಳನ್ನು ನೀಡುತ್ತ ಕರ್ತವ್ಯ ಪ್ರಜ್ಞೆಯನ್ನು ಇತರರಿಗೆ ತೋರಿಸಿದ್ದರು. ಛಾಯಾಗ್ರಹಣದಲ್ಲಿಯೂ ತುಳಜಣ್ಣವರ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದರು. ಶರಣರು ವಿದ್ಯೆಗೆ ಕಡೆಯಿಲ್ಲ, ಬುದ್ಧಿಗೆ ಬೆಲೆಯಿಲ್ಲ, ಮರಣಕ್ಕೆ ಮದ್ದಿಲ್ಲ ಎಂದಿದ್ದಾರೆ ಹುಟ್ಟಿದ ಮನುಷ್ಯ ತೀರಿ ಹೋಗಲೇ ಬೇಕು ಆದರೆ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ ಬಸವರಾಜ ತುಳಜಣ್ಣವರ ಇನ್ನಷ್ಟು ದಿನ ಇರಬೇಕಾಗಿತ್ತು, ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಜನಸ್ತೋಮ ನೋಡಿದರೆ ವ್ಯಕ್ತಿಯ ಬದುಕು ತಿಳಿಯುತ್ತದೆ ಎಂದು ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ ಪತ್ರಕರ್ತ, ಛಾಯಾಗ್ರಾಹಕ ಬಸವರಾಜ ತುಳಜಣ್ಣವ ಭಾವಪೂರ್ಣ ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಮುಖಂಡರಾದ ರವೀಂದ್ರ ಯಲಿಗಾರ ಮಾತನಾಡಿ ಪಟ್ಟಣದ ಅಭಿವೃದ್ಧಿಯಲ್ಲಿ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಪತ್ರಕರ್ತ, ಛಾಯಾಗ್ರಾಹಕ ಬಸವರಾಜ ತುಳಜಣ್ಣವರ ಅವರ ಸೇವೆ ಅಮೋಘವಾದದ್ದು, ಅವರ ಅಗಲಿಕೆ ನಮಗೆಲ್ಲ ಅಪಾರವಾದ ದುಃಖ ನೀಡಿದೆ, ಅವರ ಕುಟುಂಬದ ಜೊತೆಗೆ ಸದಾ ನಾವು ಇರುತ್ತೇವೆ, ಸಹಾಯದ ಹಸ್ತ ಚಾಚುವುದರ ಜೊತೆಗೆ ನೈತಿಕ ಬೆಂಬಲ ನೀಡುತ್ತೇವೆ. ತುಳಜಣ್ಣವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.
ಸಭೆಯಲ್ಲಿ ಪಂಚನಗೌಡ ದ್ಯಾಮನಗೌಡರ, ಉಮೇಶ ಬಾಳಿ, ಎಂ.ಆರ್.ಗೋಪಶೆಟ್ಟಿ, ಪುರಸಭೆ ಅಧ್ಯಕ್ಷ ಸಿ.ಬಿ.ಬಾಳಿ, ನೂತನ ಗೆಳೆಯರ ಬಳಗದ ಅಧ್ಯಕ್ಷ ಸುರೇಶ ಜಾವೂರ, ಮಲ್ಲಣ್ಣ ಹನಸಿ, ಸುಭಾಸ ಗೀದಿಗೌಡ್ರ, ಟಿ.ಎನ್.ಮುರಂಕರ, ರಾಧಾ ಕುಲಕರ್ಣಿ ಮಾತನಾಡಿದರು. ಭವಾನಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಸೋಮಶೇಖರ ಯಲಿಗಾರ, ಮುನವಳ್ಳಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಅಂಬರೀಷ ಯಲಿಗಾರ, ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರು ಜಂಬ್ರಿ, ಕೇಶವ ಭಂಡಾರಿ, ಶಾಂತಲಾ ತುಳಜಣ್ಣವರ, ನಂದಿನಿ ತುಳಜಣ್ಣವರ, ಮಹಾಂತೇಶ ಶೆಟ್ಟರ, ಸಂಜೀವಕುಮಾರ, ಸುಮಾ ಯಲಿಗಾರ, ಪದ್ಮಾವತಿ ಪಾಟೀಲ, ಅನುರಾಧಾ ಬೆಟಗೇರಿ, ಗೌರಿ ಜಾವೂರ, ಬಿ.ಬಿ.ಹುಲಿಗೊಪ್ಪ, ವೀರಣ್ಣ ಕೊಳಕಿ, ಎಸ್.ಬಿ.ಹಿರಲಿಂಗಣ್ಣವರ, ಪ್ರಶಾಂತ ತುಳಜಣ್ಣವರ, ಜಗದೀಶ ಹಿರೇಮಠ, ಆರ್.ಎಚ್.ಪಾಟೀಲ, ಬಾಳು ಹೊಸಮನಿ, ಚಂದ್ರು ಬಾಳಿ, ಸೇರಿದಂತೆ ರಾಣಿ ಚನ್ನಮ್ಮ ಸಹೇಲಿ ಗ್ರೂಪ್, ಇನ್ನರ್‌ವ್ಹೀಲ್ ಕ್ಲಬ್, ನೂತನ ಗೆಳೆಯರ ಬಳಗದ ಸದಸ್ಯರು, ತುಳಜಣ್ಣವರ ಅಭಿಮಾನಿ ಬಳಗದವರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
WhatsApp Group Join Now
Telegram Group Join Now
Share This Article