ಘಟಪ್ರಭಾ: ಇಂದಿನ ಆಧುನಿಕ ಸಮಾಜದಲ್ಲಿ ದೇವರು, ಭಕ್ತಿ, ಮುಂತಾದ ಪ್ರಧಾನ ಆಸ್ತಿಕ ಪ್ರಧಾನ ಸಮುದಾಯಕ್ಕೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದೆ, ಹೂಗಾರ ಮಾದಯ್ಯನವರ, ವಿನಯ, ಸಭ್ಯತೆ ಹಾಗೂ ಆಸ್ತಿಕತೆಯನ್ನು ಎಲ್ಲರೂ ಬೆಳೆಸಿಕೊಂಡು ಹೋಗಬೇಕು ಎಂದು ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಪೀಠಧಿಪತಿಗಳಾದ ಡಾ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.
ಅವರು ರವಿವಾರ ದಿನಾಂಕ 07-09-2025 ರಂದು ಘಟಪ್ರಭಾದ ಶ್ರೀ ಮಾರುತಿ ಮಂದಿರದಲ್ಲಿ ಹೂಗಾರ ಮಾದಯ್ಯನವರ ಜಯಂತಿ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಹೊಸ ಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರು ಮಾತನಾಡಿ ಹೂಗಾರ ಸಮಾಜದ ಎಲ್ಲಾ ಸದಸ್ಯರು ಸಹಕಾರ ಸಹಬಾಳ್ವೆಯಿಂದ ಆದರ್ಶ ಬದುಕು ಸಾಗಿಸುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಧುರೀಣರಾದ ರಾಮಣ್ಣ ಹುಕ್ಕೇರಿ ಮಾತನಾಡಿ ಘಟಪ್ರಭಾಲ್ಲಿ ಯಾವದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಹೂಗಾರ ಸಮಾಜ ಭಾಂದವರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಾದ ಸುರೇಶ ಪಾಟೀಲ ಮಾತನಾಡಿ ಹೂಗಾರ ಸಮಾಜದವರು ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ದೇಶಭಕ್ತಿ ಹಾಗೂ ಸಂಗೀತ ಭಜನೆ ಇತ್ಯಾದಿ ಕಾರ್ಯಗಳಲ್ಲಿಯೂ ಸಹ ನಿಪುಣರಾಗಿದ್ದಾರೆ ಇದು ಅಭಿಮಾವ ಪೂರ್ಣವಾದ ವಿಷಯ ಎಂದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಮಾತನಾಡಿ ಹೂಗಾರ ಸಮಾಜದವರು ಹೂ ಪೂರೈಕೆ ಮತ್ತು ಪೂಜೆ ಪುನಸ್ಕಾರಗಳನ್ನು ಮಾಡುವದರ ಮೂಲಕ ದೇವರು ಮತ್ತು ಭಕ್ತರುಗಳ ನಡುವೆ ಸ್ನೇಹ ಸಂಕೋಲೆ ಆಗಿದ್ದಾರೆ ಎಂದರು
ವೇದಿಕೆಯಲ್ಲಿ ಹಿರಿಯರಾದ, ಮಹಾದೇವ ದೇಶಪಾಂಡೆ, ಅಲ್ಲಪ್ಪಾ ಹುಕ್ಕೇರಿ, ಮತ್ತು ಗೋಕಾಕ, ಮೂಡಲಗಿ ತಾಲೂಕಗಳ ಹೂಗಾರ ಸಮಾಜದ ಆಧ್ಯಕ್ಷರಾದ ಮಾರುತಿ ಬಸಪ್ಪ ಹೂಗಾರ, ಚಿದಾನಂದ ಹೂಗಾರ, ಮತ್ತು ಮುಂತಾದವರು ಇದ್ದರು, ಗುರುಬಸಯ್ಯಾ ಕರ್ಪೂರಮಠ ಕಾರ್ಯಕ್ರಮ ನಿರೂಪಿಸಿದರು. ಹೂಗಾರ ಸಮಾಜದ ಮುಖಂಡರಾದ ವೀರಭದ್ರ ಹೂಗಾರ, ಕಾಡೇಶ ಹೂಗಾರ, ಗುರು ಬಸಯ್ಯಾ ಹೂಗಾರ, ಶಂಕರ ಹೂಗಾರ, ಗೋಕಾಕ ಹಾಗೂ ಮೂಡಲಗಿ ತಾಲೂಕಿ ಹೂಗಾರ ಸಮಾಜದ ಬಾಂಧವರು ಮತ್ತು ಮುಖಂಡರಾದ ಪ್ರವೀಣ ಮಟಗಾರ, ಸಂತೋಷ ಹುಕ್ಕೇರಿ, ಆನಂದ ಬನನ್ನವರ, ರಮೇಶ್ ಕಬಾಡಗಿ, ಅನಿಲ್ ಮಾಳಿ, ಮುತ್ತಣ್ಣ ಹತ್ತರವಾಟ, ಬಾಳೇಶ ಕಮತ, ಕಾಶೀನಾಥ್ ರಾಜಣ್ಣವರ, ಕಾಡಪ್ಪಾ ಕರೋಶಿ, ಸೇರಿದಂತೆ ನೂರಾರು ನಾಗರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.