ಅತ್ಯಾಚಾರಿಗಳಿಗೆ ಉತ್ತೇಜನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ : ಸುಭಾಷ ಪಾಟೀಲ 

Ravi Talawar
ಅತ್ಯಾಚಾರಿಗಳಿಗೆ ಉತ್ತೇಜನ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ : ಸುಭಾಷ ಪಾಟೀಲ 
WhatsApp Group Join Now
Telegram Group Join Now
ಬೆಳಗಾವಿ. ಇದೇ ಮಂಗಳವಾರ ಎನ್‌ಐಎ ಪರಪ್ಪರ ಅಗ್ರಹಾರ ಜೈಲಿನ ಮೇಲೆ ದಾಳಿ
ಮಾಡಿದಾಗ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ|| ನಾಗರಾಜ್, ಉತ್ತರ
ವಿಭಾಗದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಎಎಸ್‌ಐ ಚಾಂದ್ ಪಾಷಾ
ತಲೆಮರೆಸಿಕೊಂಡಿರುವ ಕಾರಣ  ಶಂಕಿತ ಉಗ್ರ ಜುನೈದ್ ಅಹಮ್ಮದ್‌ನ ತಾಯಿ ಅನೀಸ್
ಫಾತಿಮಾ ಬಂಧಿತರು ಇವರಿಂದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನಲ್ಲಿ ಮನೋವೈದ್ಯ ನಾಗರಾಜ್ ನೀಡಿದ ಮೊಬೈಲ್‌ಗಳಿಂದಲೇ ದುಷ್ಕೃತ್ಯಕ್ಕೆ
ಸಂಚು ಮಾಡಿದ್ದು, ಎನ್‌ಐಎ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು ರಾಜ್ಯ
ಕಾಂಗ್ರೆಸ್ ಸರಕಾರದಲ್ಲಿ ಜೈಲಿನಲ್ಲಿಂದಲೇ ಎಲ್ಲಾ ದುಷ್ಕೃತ್ಯಗಳಿಗೆ ಸಂಚು ನಡೆಯುತ್ತಿದೆ.
ಇದು ಗೃಹ ಇಲಾಖೆಯ ವೈಫಲ್ಯತೆಯನ್ನು ಎದ್ದು ತೋರಿಸುತ್ತಿದೆ.
ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಆಟೋ ಚಾಲಕ ಸೇರಿ ಮೂವರು
ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು
ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ಬಳಿ ಏಪ್ರಿಲ್ 17 ನಡೆದಿದೆ.
• ಜೂನ್ 1 ರಂದು ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ 15 ವರ್ಷದ ಅಪ್ರಾಪ್ತ
ಬಾಲಕಿಯ ಮೇಲೆ ಆಕೆಯ ಸ್ನೇಹಿತ ಸೇರಿ 6 ಮಂದಿ ಸಾಮೂಹಿಕವಾಗಿ ಅತ್ಯಾಚಾರ
ಎಸಗಿದ್ದಾರೆ.
• ಬೆಂಗಳೂರಿನಲ್ಲಿ ಅತ್ಯಾಚಾರವೆಸಗಿ
ದೊಡ್ಡನಾಗಮಂಗಲದಲ್ಲಿ ಮಹಿಳೆ ಮೇಲೆ ಸಾಮೂಹಿಕ ಬಳಿಕ ಹಣ ಸುಲಿಗೆ ಮಾಡಿದ್ದಲ್ಲದೆ ಮನೆಯಲ್ಲಿದ್ದ ಪಿಠೋಪಕರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜುಲೈ 9 ರಂದು
ನಡೆದಿದೆ.ಹರಿಯಾಣ ಮೂಲದ ಮೂವರು ಶಾರ್ಪ್‌ಶೂಟರ್‌ಗಳು ಬೆಂಗಳೂರಿಗೆ ಬಂದು
ನಕಲಿ ಪಾಸ್ ಪೋರ್ಟ್ ಪಡೆದುಕೊಂಡು ಹೊರ ದೇಶಕ್ಕೆ ಹಾರಿ ಹೋಗುತ್ತಾರೆ.
ಹರಿಯಾಣದ ಎಟಿಎಸ್ ಪೊಲೀಸರಿಗೆ ತಿಳಿದ ಮಾಹಿತಿ ಪ್ರಕಾರ ಕೋರಮಂಗಲದ
ಪಾಸ್‌ಪೋರ್ಟ್‌ ಕಚೇರಿಯಿಂದ ಇವರಿಗೆ ಪಾಸ್‌ಪೋರ್ಟ್ ಸಿಕ್ಕಿರುವುದು
ತಿಳಿದುಬರುತ್ತದೆ. ಅಮಿನ್ ಉಸ್ಮಾನ್ ಎನ್ನುವ ವ್ಯಕ್ತಿ ಈ ಪಾಸ್‌ಪೋರ್ಟ್‌
ನೀಡಿರುತ್ತಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಕೊಲೆ, ಸುಲಿಗೆ, ಅತ್ಯಾಚಾರ ಗಳಿಗೆ  ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಭೃಷ್ಟ ಕಾಂಗ್ರೆಸ್ ಸರ್ಕಾರ
ಮಾಡುತ್ತಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಶುಭಾಷ ಪಾಟೀಲ  ಅವರು ಪತ್ರಿಕಾ ಪ್ರಕಟಣೆ ಮೂಲಕ  ಆರೋಪಿಸಿದ್ದಾರೆ.
WhatsApp Group Join Now
Telegram Group Join Now
Share This Article