“ಕಂಪನಿ ಕಾರ್ಯದರ್ಶಿ ವೃತ್ತಿಯು ಭಾರತೀಯ ಆರ್ಥಿಕತೆಯನ್ನು ರೂಪಿಸುತ್ತದೆ”

MK HasiruKranti
“ಕಂಪನಿ ಕಾರ್ಯದರ್ಶಿ ವೃತ್ತಿಯು ಭಾರತೀಯ ಆರ್ಥಿಕತೆಯನ್ನು ರೂಪಿಸುತ್ತದೆ”
WhatsApp Group Join Now
Telegram Group Join Now
ಬಳ್ಳಾರಿ, ಏ.06..: ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆಯ ಸಭಾಭವನದಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ “ಕಂಪನಿ ಕಾರ್ಯದರ್ಶಿ ವೃತ್ತಿ” ಕುರಿತ ವಿಶೇಷ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮೇಟ್ರಿ, ಸಿ.ಎಸ್. ಪರಮೇಶ್ವರ ಭಟ್ ಹಾಗೂ ಪ್ರಾಂಶುಪಾಲರಾದ ಮಹಾಂತೇಶ್ ಎನ್. ಆರಾಧ್ಯಮಠ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ರವಿಕಿರಣ್ ಡಿ ಅವರು, ಕಂಪನಿ ಕಾರ್ಯದರ್ಶಿ ವೃತ್ತಿಯು ಭಾರತೀಯ ಆರ್ಥಿಕತೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಎಸ್ ಹೇಮಾದ್ರಿಬಾಯಿ, ಡಾ. ಸುಜಯ ಕುಮಾರ, ಶೀನಾಗ, ಶಾಲೋಮ್, ಅಶ್ವಿನಿ, ಮೈಲಾರಪ್ಪ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
One attachment  •  Scanned by Gmail

WhatsApp Group Join Now
Telegram Group Join Now
Share This Article