ರನ್ನ ಬೆಳಗಲಿ: ಜು.೧೯.,ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಾಜ್ಯದ ನಾಲ್ಕು ಭಾಗಗಳಲ್ಲಿಯೂ ಯುವ ಕವಿಗೋಷ್ಟಿಯನ್ನು ಹಮ್ಮಿಕೊಳ್ಳುತ್ತಿದೆ. ಬೆಳಗಾವಿ ವಿಭಾಗದ ’ಯುವ ಕವಿಗೋಷ್ಟಿ’ಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯ ಯುವ ಕವಿ ಸುರೇಶ ಎಲ್.ರಾಜಮಾನೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮೆಯು ಅಧಿಕೃತವಾಗಿ ಘೋ?ಣೆ ಮಾಡಿದೆ. ಸುರೇಶ ರಾಜಮಾನೆ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಡೋಣಿತೋಟದ ಕಿರಿಯ ಪ್ರಾಥಮಿಕ ಶಾಲೆಯಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯದ ಮೂಲಕ ಗುರುತಿಸಿಕೊಂಡಿದ್ದಲ್ಲದೆ, ಮೂರು ಕವನಸಂಕಲನ ಒಂದು ಹನಿಗವನ ಸಂಕಲನ ಹಾಗೂ ಒಂದು ಗಜಲ್ ಸಂಕಲನ ಮತ್ತು ಮಕ್ಕಳಿಗಾಗಿ ಮಹಿಳಾ ಸಾಹಿತಿಗಳ ಮಾಹಿತಿ ಪುಸ್ತಕ ಹೀಗೆ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದೆ ದಿನಾಂಕ ೨೧ ಸೋಮವಾರ ದಂದು ಬೆಳಗಾವಿಯ ಕನ್ನಡ ಭವನದಲ್ಲಿ ಯುವ ಕವಿಗೋಷ್ಟಿಯು ಜರುಗುತ್ತಿದ್ದು ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.