ಗದಗ: ೨೦೧೪ರ ಲೋಕಸಭಾ ಚುನಾವಣೆ ಗೆಲುವಿಗೆ ಅಚ್ಚೆ ದಿನ್ ಎಂದು ಜನರಿಗೆ ನಾಮಹಾಕಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಅಶೋಕ ಮಂದಾಲಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ೨೦೨೬ರ ಏ. ೧ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವನ್ನು ಶೇ. ೫ರಷ್ಟು ಹೆಚ್ಚಿಸಿದ ಕೇಂದ್ರ ಬಿಜೆಪಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿದೆ. ಪ್ರತಿ ತಿಂಗಳು ಐPಉ ಬೆಲೆಗಳನ್ನು ಹೆಚ್ಚಳ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ೨೦೨೬ರ ಮಾರ್ಚ್ ೭ರಂದು ಗೃಹ ಬಳಕೆ ಐPಉ ಬೆಲೆಯನ್ನು ೬೦ ರೂ. ಹಾಗೂ ವಾಣಿಜ್ಯ ಬಳಕೆ ಐPಉ ಬೆಲೆಯನ್ನು ೧೧೫ ರೂ. ಹೆಚ್ಚಿಸಿ ಜನರ ಬದುಕನ್ನು ನರಕ ಮಾಡಿದೆ.
ಈಗ ಮತ್ತೆ ೨೦೨೬ರ ಏ. ೧ರಂದು ವಾಣಿಜ್ಯ ಬಳಕೆ ಐPಉಯನ್ನು ೧೯೫.೫೦ ರೂ. ಹೆಚ್ಚಿಸಿ ೨,೨೦೦ ರೂ. ತಲುಪಿದ್ದು ೫ ಏg ಗೃಹ ಬಳಕೆಯ ಐPಉಯನ್ನು ೫೧ ರೂ. ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಕೇವಲ ಐPಉ ದರ ಮಾತ್ರ ಹೆಚ್ಚಳವಾಗಿಲ್ಲ ಆಟೋ ಐPಉ ದರವು ೧೧.೭೮ ರೂ. ಹೆಚ್ಚಳವಾಗಿದ್ದು ೮೯.೫೨ ರೂ. ತಲುಪಿ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಆಟೋ ಚಾಲಕರ ಬದುಕು ಅತಂತ್ರವಾಗುವಂತೆ ಮಾಡಿದೆ.
ವಿಮಾನಗಳಿಗೆ ಬಳಸುವ ವೈಮಾನಿಕ ಇಂಧನ (ಂಖಿಈ) ಪ್ರತಿ ೧ ಸಾವಿರ ಲೀಟರ್ಗೆ ೯೬,೬೩೮ ರೂ. ದರವು ಈಗ ೨ ಲಕ್ಷ ರೂ. ಗಡಿ ದಾಟ್ಟಿದ್ದು ವಿಮಾನ ಟಿಕೆಟ್ ದರ ಹೆಚ್ಚಳವಾಗಿದೆ. ೨೦೨೬ರ ಜನವರಿಯಲ್ಲಿ ವಾಣಿಜ್ಯ ಐPಉ ಸಿಲಿಂಡರ್ ಬೆಲೆಯನ್ನು ೧೧೧ ರೂ. ಹೆಚ್ಚಳ ಮಾಡಿ ಫೆಬ್ರವರಿ ೨೦೨೬ರ ಕೇಂದ್ರ ಬಜೆಟ್ ದಿನವೇ ೪೯-೫೦ ರೂ. ಹೆಚ್ಚಳ ಮಾಡಿ ಒಟ್ಟು ಈ ವರ್ಷದ ಮೊದಲ ೩ ತಿಂಗಳಲ್ಲೇ ವಾಣಿಜ್ಯ ಬಳಕೆ ಐPಉ ಮೇಲೆ ೩೦೦ ರೂ. ಹಾಗೂ ಗೃಹ ಬಳಕೆ ಐPಉ ಮೇಲೆ ೬೦ ಹೆಚ್ಚಳ ಮಾಡಿ ಅಚ್ಚೆದಿನ್ ಎಂದು ಬೊಗಳೆ ಬಿಡುತ್ತಿದೆ ಕೇಂದ್ರ ಮೋದಿ ಸರ್ಕಾರ.
೨೦೨೨ರ ಏಪ್ರಿಲ್ ೧ರಂದು ಮೋದಿ ಸರ್ಕಾರ ಹಾಗೂ ಓPPಂಯು ಔಷಧಿಗಳ ದರವನ್ನು ಶೇ. ೧೦.೭೬ಕ್ಕೆ ಏರಿಸಿತ್ತು. ೨೦೨೩ರ ಏಪ್ರಿಲ್ ೧ರಂದು ಮೋದಿ ಸರ್ಕಾರ ಔಷಧಿಗಳ ದರವನ್ನು ಶೇ. ೧೨.೧೨ಕ್ಕೆ ಹೆಚ್ಚಿಸಿ ಜನರ ಬದುಕು ನರಕ ಮಾಡಿದೆ. ಈಗಲೂ ಇದು ಮುಂದುವರಿದಿದ್ದು ೨೦೨೬ರ ಏಪ್ರಿಲ್ ೧ರಿಂದ ೯೦೦ ಔಷಧಿಗಳ ದರ ಏರಿಕೆಯಾಗುತ್ತಿದೆ.
ದೇಶದ ರೈತರು, ಕೂಲಿಕಾರ್ಮಿಕರು ಮತ್ತು ಜನಸಾಮಾನ್ಯರು ಉಪಯೋಗಿಸುವ ಬೆಣ್ಣೆ, ಹಾಲು ಮತ್ತು ಮೊಸರು ಇನ್ನಿತರ ವಸ್ತುಗಳ ಮೇಲೆ ಶೇ. ೧೮ರಷ್ಟು ಉSಖಿ ಹಾಕಿ ಕೊಳ್ಳೆ ಹೊಡೆದ ಕೇಂದ್ರ ಸರ್ಕಾರ ೨೦೨೫-೨೬ರಲ್ಲಿ ಒಟ್ಟು ೪೨ ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ.
ಕೇರ್ ಎಡ್ ರೇಟಿಂಗ್ಸ್ನ ವರದಿ ಪ್ರಕಾರ ಭಾರತಿಯ ಕುಟುಂಬಗಳ ಸಾಲವು ಉಆPಯ ಶೇ. ೩೮ರಷ್ಟಿದ್ದು ಜನರನ್ನು ಸಾಲದ ಸುಳಿಗೆ ಸಿಲುಕಿಸಿ ೨೦೧೪ರಲ್ಲಿ ೫೫ ಲಕ್ಷ ಕೋಟಿ ರೂ. ಇದ್ದ ದೇಶದ ಸಾಲವನ್ನು ೨೧೬ ಲಕ್ಷ ಕೋಟಿ ರೂ.ಗೆ ಹೆಚ್ಚಿಸಿ ಪ್ರತಿಯೊಬ್ಬರ ಮೇಲೂ ೧ ಲಕ್ಷ ರೂಪಾಯಿಗೂ ಹೆಚ್ಚು ಸಾಲ ಹೊರಿಸಿದೆ.ಭಾರತದ ಜನಸಂಖ್ಯೆಯ ಶೇ. ೫೦ರಷ್ಟು ಜನರು ತಮ್ಮ ಒಟ್ಟು ಆದಾಯದ ಅರ್ಧದಷ್ಟು (ಶೇ. ೪೫-೫೦) ಆಹಾರವನ್ನು ಖರೀದಿಸಲು ಖರ್ಚು ಮಾಡುತ್ತಿದ್ದು ಇದರಿಂದ ಕುಟುಂಬಗಳ ಉಳಿತಾಯವು ಉಆPಯ ಸರಿಸುಮಾರು ಶೇ. ೫.೧ರಿಂದ ೫.೩ಕ್ಕೆ ಕುಸಿದಿದ್ದು ೪೫ ವರ್ಷದ ಕನಿಷ್ಠ ಮಟ್ಟಕ್ಕೆ ತಲುಪುವಂತೆ ಮಾಡಿದೆ.
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆ ಗೃಹಿಣಿಯರಿಗೆ ನೀಡುತ್ತಿರುವ ೨೦೦೦ ರೂ. ಹಣವು ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಸಂಕಷ್ಟದಿಂದ ಪಾರಾಗಲು ನೆರವಾಗಿದೆ.
ಏಪ್ರಿಲ್ ೨೦೨೫ರಲ್ಲಿ ಐPಉ ಸಿಲಿಂಡರ್ ಬೆಲೆಯನ್ನು ೫೦ ರೂ. ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆದು ದೇಶದ ಜನರ ಖರೀದಿಸುವ ಸಾಮರ್ಥ್ಯ ಕುಗ್ಗಿಸಿದ ಕೇಂದ್ರ ಬಿಜೆಪಿ ಸರ್ಕಾರ ಐPಉ ಸಿಲಿಂಡರ್ ಮಾತ್ರವಲ್ಲ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ೨ ರೂ. ಹೆಚ್ಚಿಸಿ ದೇಶದ ಜನರ ಬದುಕನ್ನೇ ನರಕ ಮಾಡಿತ್ತು. ೨೦೧೪ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲ ಬೆಲೆ ೧೨೦ ಡಾಲರ್ ಇದ್ದಾಗ ಪೆಟ್ರೋಲ್ ೭೧ ರೂ. ಮತ್ತು ಡಿಸೇಲ್ ೫೫ ರೂ.ಗೆ ಸಿಗುತ್ತಿತ್ತು. ಆದರೆ, ಈಗ ಪ್ರತಿ ಬ್ಯಾರಲ್ ಕಚ್ಚಾ ತೈಲ ಬೆಲೆ ೬೪ ಡಾಲರ್ಗೆ ಲಭ್ಯವಿದ್ದರು ಪೇಟ್ರೋಲ್ ೧೦೩.೪೪ ರೂ. ಮತ್ತು ಡೀಸೆಲ್ ೯೦.೨೧ ರೂ.ಗೆ ಹೆಚ್ಚಳ ಮಾಡಿ ಜನರನ್ನು ದೋಚುತ್ತಿದ್ದು, ೨೦೧೪ರಿಂದ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಯಿಂದ ೫೦ ಲಕ್ಷ ಕೋಟಿ ರೂ. ಸಂಗ್ರಹಿಸಿದೆ.
ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿರುವ ಮೇಟ್ರೋದ ಟಿಕೇಟ್ ದರವನ್ನು ಫೆಬ್ರವರಿ ೨೦೨೫ರಲ್ಲಿ ಮೆಟ್ರೋ ದರವನ್ನು ಶೇ. ೧೦೦ರಷ್ಟು ಹೆಚ್ಚಿಸಿ ಕನ್ನಡಿಗರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ದ್ವೇಷ ಮೂಡುವಂತೆ ಮಾಡಿತು. ೨೦೨೦ರ ಕೊರೋನದಂತ ಮಹಾಮಾರಿಯ ಕಾಲದಲ್ಲಿಯೂ ದೇಶದ ಜನರ ಮೇಲೆ ಕನಿಷ್ಟ ಕನಿಕರವಿಲ್ಲದೇ ಎಲ್ಪಿಜಿ ಬೆಲೆಯನ್ನು ೫೮೧ ರೂ.ದಿಂದ ೬೯೪ ರೂ.ಗೆ ಹೆಚ್ಚಳ, ಪೆಟ್ರೋಲ್ ಬೆಲೆ ೭೨ರಿಂದ ೮೬ಕ್ಕೆ, ಡಿಸೇಲ್ ಬೆಲೆ ೬೬ರಿಂದ ೭೮ಕ್ಕೆ ಹೆಚ್ಚಳ ಮಾಡಿತ್ತು.
ಸತತ ೭ ವರ್ಷಗಳ ಕಾಲ ಭಾರತೀಯ ರೂಪಾಯಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಈ ವರ್ಷವೂ US ಡಾಲರ್ಗೆ ೯೪ ರೂ. ಕನಿಷ್ಠಕ್ಕೆ ತಲುಪಿದರೂ ಗಪ್ ಚುಪ್ ಎನ್ನದಂತೆ ಸುಮ್ಮನಿರುವ ಮೋದಿ ಸರ್ಕಾರ ೭ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವುದು ಅಸಾಧ್ಯವಾಗಿದೆ.
ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಏಪ್ರಿಲ್ ೨೦೨೧ರಲ್ಲಿ ಪೆಟ್ರೋಲ್ ಮೇಲೆ ಶೇ. ೩೫ ಮತ್ತು ಡೀಸೆಲ್ ಮೇಲೆ ಶೇ. ೨೪ ಮಾರಾಟ ತೆರಿಗೆಯನ್ನು ವಿಧಿಸಿ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದರ ಬಗ್ಗೆ ಬಿಜೆಪಿ ಏಕೆ ಚಕಾರವೆತ್ತುತ್ತಿಲ್ಲ. ವಾರ್ಷಿಕ ೧೨ ಲಕ್ಷ ರೂ. ವೆರಿಗೆ ಆದಾಯ ತೆರಿಗೆ ವಿನಾಯಿತಿಯಿಂದ ಜನರಿಗೆ ಅನುಕೂಲವಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಬೊಬ್ಬೆಹೊಡೆಯುತ್ತಿದೆ ವಾಸ್ತವದಲ್ಲಿ ಸರಿಸುಮಾರು ಶೇ. ೫-೭ ಸಂಬಳ ಹೆಚ್ಚಾಗಿದ್ದು ಇದೂ ಕೂಡ ಕಳೆದ ೩ ವರ್ಷದಲ್ಲಿ ಸರಾಸರಿ ಶೇ. ೫.೫ ಹಣದುಬ್ಬರಕ್ಕೆ ಸರಿಸಮವಾಗುವಂತೆ ಮಾಡಿದೆ. ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರಿಂದ ಹಿಂಡಿ ಹಿಪ್ಪೆಕಾಯಿ ಮಾಡಿದರೂ ಅಚ್ಚೆ ದಿನ್ ಎಂದು ಬೊಗಳೆ ಬಿಡುತ್ತಿರುವ ಮೋದಿ ೨೦೧೪ರಲ್ಲಿ ೫೫ ಲಕ್ಷ ಕೋಟಿ ಇದ್ದ ದೇಶದ ಸಾಲವನ್ನು ೨೦೫ ಲಕ್ಷ ಕೋಟಿಗೆ ಹೆಚ್ಚಿಸಿ ಪ್ರತಿಯೊಬ್ಬ ಪ್ರಜೆಯ ಮೇಲೆ ಸರಾಸರಿ ಸಾಲ ಸುಮಾರು ೧.೫ ಲಕ್ಷ ರೂ ಹೊರಿಸಿದ್ದಾರೆ ಎಂದು ಅಶೋಕ ಮಂದಾಲಿ ಆರೋಪಿಸಿದ್ದಾರೆ.
೨೦೧೧ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೫೦೧೧.೪೨ ರೂ. ಇದ್ದಾಗ ಪೆಟ್ರೋಲ್ ೫೮.೫, ಡೀಸೆಲ್ ೩೭.೭೫, ಎಲ್ಪಿಜಿ ೮೭೭ ಹಾಗೂ ಡಾಲರ್ ಮೌಲ್ಯ ೪೬.೬೭ರಷ್ಟಿತ್ತು. ೨೦೧೨ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೫೪೯೯.೯೫ ರೂ.. ಇದ್ದಾಗ ಪೆಟ್ರೋಲ್ ೬೫.೬, ಡೀಸೆಲ್ ೪೦.೯೧, ಎಲ್ಪಿಜಿ ೧೦೨೧ ಹಾಗೂ ಡಾಲರ್ ಮೌಲ್ಯ ೪೯.೫ರಷ್ಟಿತ್ತು. ೨೦೧೪ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೩೫೪೨.೯೯ ರೂ. ಇದ್ದಾಗ ಪೆಟ್ರೋಲ್ ೭೨.೨೬, ಡೀಸೆಲ್ ೫೫.೪೮, ಎಲ್ಪಿಜಿ ೧೨೩೪ ಹಾಗೂ ಡಾಲರ್ ಮೌಲ್ಯ ೬೧.೮ರಷ್ಟಿತ್ತು. ೨೦೧೬ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೩೭೬೧.೪೮ ರೂ. ಇದ್ದಾಗ ಪೆಟ್ರೋಲ್ ೬೨.೫೧, ಡೀಸೆಲ್ ೫೪.೩೮, ಎಲ್ಪಿಜಿ ೫೮೪ ಹಾಗೂ ಡಾಲರ್ ಮೌಲ್ಯ ೬೬.೨ರಷ್ಟಿತ್ತು. ೨೦೧೮ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೩೪೩೪.೦೫ ರೂ. ಇದ್ದಾಗ ಪೆಟ್ರೋಲ್ ೭೫.೫೫, ಡೀಸೆಲ್ ೬೭.೩೮, ಎಲ್ಪಿಜಿ ೯೪೨ ಹಾಗೂ ಡಾಲರ್ ಮೌಲ್ಯ ೬೩.೮೩ರಷ್ಟಿತ್ತು. ೨೦೨೦ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೩೬೯೫.೯೩ ರೂ. ಇದ್ದಾಗ ಪೆಟ್ರೋಲ್ ೮೬.೫೨, ಡೀಸೆಲ್ ೭೮.೩೧, ಎಲ್ಪಿಜಿ ೬೯೪ ಹಾಗೂ ಡಾಲರ್ ಮೌಲ್ಯ ೭೧.೩೫ರಷ್ಟಿತ್ತು. ೨೦೨೨ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೮೬೬೯.೮೨ ರೂ. ಇದ್ದಾಗ ಪೆಟ್ರೋಲ್ ೧೧೧.೦೯, ಡೀಸೆಲ್ ೯೪.೭೯, ಎಲ್ಪಿಜಿ ೧೦೬೨ ಹಾಗೂ ಡಾಲರ್ ಮೌಲ್ಯ ೮೨.೮೩ರಷ್ಟಿತ್ತು. ೨೦೨೪ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೬೭೬೦ ರೂ. ಇದ್ದಾಗ ಪೆಟ್ರೋಲ್ ೧೦೦, ಡೀಸೆಲ್ ೮೬.೫.೪೮, ಎಲ್ಪಿಜಿ ೮೦೩ ಹಾಗೂ ಡಾಲರ್ ಮೌಲ್ಯ ೮೩.೬೮ರಷ್ಟಿತ್ತು. ೨೦೨೬ರಲ್ಲಿ ಕಚ್ಚಾ ತೈಲ ಬ್ಯಾರಲ್ಗೆ ೬೯೨೦ ರೂ. ಇದ್ದು ಪೆಟ್ರೋಲ್ ೧೦೨, ಡೀಸೆಲ್ ೮೯.೫, ಎಲ್ಪಿಜಿ ೯೧೩ ಹಾಗೂ ಡಾಲರ್ ಮೌಲ್ಯ ೯೩.೫ರಷ್ಟಿದೆ.
೨೦೧೪ರ ಲೋಕಸಭಾ ಚುನಾವಣೆ ಗೆಲುವಿಗೆ ಅಚ್ಚೆ ದಿನ್ ಎಂದು ಜನರಿಗೆ ನಾಮಹಾಕಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ: ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ


