ಬಳ್ಳಾರಿ : 05.ರೆಡ್ಡಿ ಜನಸಂಘ ಸ್ಥಾಪನೆಯಾಗಿ ಇಂದಿಗೆ ನೂರು ವರ್ಷಗಳಾಗಿವೆ . ಈ ಶತಮಾನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವೇಮನಾನಂದ ಸ್ವಾಮೀಜಿ ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ರಾಜ್ಯದಲ್ಲಿ ಸುಮಾರು 25 ರಿಂದ 30 ಲಕ್ಷ ಜನಸಂಖ್ಯೆ ಹೊಂದಿರುವ ರೆಡ್ಡಿ ಸಮಾಜದಿಂದ ಪ್ರತಿ ಸಾರಿ 25 ರಿಂದ 30 ಜನ ಶಾಸಕರು ಆಯ್ಕೆಯಾಗುತ್ತಿದ್ದಾರೆ ಅದರಲ್ಲಿ ಮೂರರಿಂದ ನಾಲ್ಕು ಜನ ಸಚಿವರಾಗಿರುತ್ತಾರೆ , ಅಷ್ಟರಮಟ್ಟಿಗೆ ನಮ್ಮ ರೆಡ್ಡಿ ಸಮುದಾಯ ರಾಜಕಾರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿ ರೆಡ್ಡಿ ಸಮುದಾಯದವರಾಗಿದ್ದರು ಮತ್ತು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರಥಮ ಮುಖ್ಯಮಂತ್ರಿ ರೆಡ್ಡಿ ಜನ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ಅವರು ತಿಳಿಸಿದರು.
ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಕೆ ಜಿ ಇಂದ ಪಿಜಿ ವರೆಗೆ ವಿದ್ಯಾಸಂಸ್ಥೆಗಳನ್ನು ಸಂಘದ ವತಿಯಿಂದ ನಡೆಸಿಕೊಂಡು ಹೋಗಲಾಗುತ್ತಿದೆ ಮುಂದಿನ ದಿನಗಳಲ್ಲಿ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ತಾಂತ್ರಿಕ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದ ಅವರು ರಾಜ್ಯ ಸರ್ಕಾರ ನಡೆಸುತ್ತಿರುವ ಜನಗಣತಿಯಲ್ಲಿ ಕಾಂತರಾಜ್ ವರದಿಯಲ್ಲಿ ನಮ್ಮ ಸಮಾಜವನ್ನು ಕೇವಲ 7 ಲಕ್ಷ ಎಂದು ಮಾತ್ರ ತೋರಿಸಿರುತ್ತಾರೆ ಆದರೆ ನಮ್ಮ ಸಮುದಾಯ ರಾಜ್ಯದಲ್ಲಿ 25 ರಿಂದ 30 ಲಕ್ಷ ಜನರಿದ್ದೇವೆ ಎಂದರು.
ಬಳ್ಳಾರಿ ಜಿಲ್ಲಾಧ್ಯಾಕ್ಷ ಎಂ ಪ್ರತಾಪ್ ರೆಡ್ಡಿ ಮಾತನಾಡಿ, ರಾಜ್ಯ ಸಂಘ ಇಂದು ಶತಮಾನದ ವಸ್ತಿಲಲ್ಲಿದ್ದರೆ ಜಿಲ್ಲಾ ಸಂಘ 75ನೇ ವರ್ಷದ ಗೋಲ್ಡನ್ ಜಿಬ್ಲಿ ಆಚರಿಸಿಕೊಳ್ಳುತ್ತಿದೆ. ಈ ಕಾರ್ಯಕ್ರಮವನ್ನು ಮುಂದಿನ ವರ್ಷ ಅದ್ದೂರಿಯಾಗಿ ನಡೆಸಲಾಗುವುದು. ಮತ್ತು ನಮ್ಮ ಸಮಾಜದ ರೆಡ್ಡಿ ಭವನವನ್ನು ಉತ್ತರ ಕರ್ನಾಟಕದಲ್ಲಿ ಅತ್ಯಂತ ಮಾದರಿಯಾಗಿ ನಿರ್ಮಿಸಲಾಗುತ್ತದೆ ಇದಕ್ಕಾಗಿ ರೆಡ್ಡಿ ಜನಸಂಘದ ಅರ್ಧ ಎಕರೆ ಸ್ಥಳದಲ್ಲಿ ಕಟ್ಟಡ ನಿರ್ಮಾಣ ನಡೆಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಈ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣಗಳ ನಿರ್ಮಿಸಿ ಅದರಿಂದ ಬರುವ ಆದಾಯದಿಂದ ಸಮಾಜದ ಇತರ ಜನಾಂಗದ ಮಕ್ಕಳಿಗೆ ಸಹ ವಿದ್ಯೆ ಆರೋಗ್ಯದ ಸೌಲಭ್ಯವನ್ನು ನೀಡಲಾಗುವುದೆಂದರು.
ಈ ಪತ್ರಿಕಾ ಗೋಷ್ಠಿಯಲ್ಲಿ ರೆಡ್ಡಿ ಜನಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣರೆಡ್ಡಿ, ನಿರ್ದೇಶಕರುಗಳಾದ ಕೃಷ್ಣಾರೆಡ್ಡಿ, ಪ್ರಭಾಕರ್ ರೆಡ್ಡಿ, ಬಾಬುರೆಡ್ಡಿ, ರಾಜಾರೆಡ್ಡಿ, ಶಾಂತರಾಜ್ ಮತ್ತು ಖಜಾಂಚಿ ಹೇಮರೆಡ್ಡಿ ಮತ್ತು ಐನಾಥರೆಡ್ಡಿ ಸೇರಿದಂತೆ ಹಲವಾರು ಜನ ರೆಡ್ಡಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು