ಕಿತ್ತು ಹೋದ ಗೂಟಗಳು, ತುಂಡಾದ ಸರಪಳಿ                   

MK HasiruKranti
ಕಿತ್ತು ಹೋದ ಗೂಟಗಳು, ತುಂಡಾದ ಸರಪಳಿ                   
WhatsApp Group Join Now
Telegram Group Join Now
                                                                                       ಬಳ್ಳಾರಿ, ಏ.11..:  ಸುವರ್ಣ ಬಳ್ಳಾರಿಯಲ್ಲಿ ನಗರದ ಸೌಂದರೀಕರಣಕ್ಕೆ  ನಡೆಸಿದ ಗೋಲ್ಡನ್ ಕಾಮಗಾರಿಗಳು  ಆರು ತಿಂಗಳಲ್ಲಿಯೇ ಕಿತ್ತು ಹೋಗುತ್ತಿವೆ.
ನಗರದ ದುರ್ಗಮ್ಮ ಗುಡಿ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ  ಪಾದಚಾರಿಗಳಿಗಾಗಿ ರಚಿಸಿರುವ ಪುಟ್ ಪಾಥ ರಸ್ತೆ ಪಕ್ಕದಲ್ಲಿ ಕಬ್ಬಿಣದಿಂದ ಗೂಟಗಳನ್ನು ನೆಟ್ಟು ಅದಕ್ಕೆ ಚೈನ್ ಅಳವಡಿಸಿತ್ತು.  ಇದರಿಂದ ಪಾದಚಾರಿಗಳು ಸುಲಭವಾಗಿ ಸುರಕ್ಷಿತವಾಗಿ ಓಡಾಡುತ್ತಿದ್ದರು.
ಆದರೆ  ಮಾಡಿದ ಆರಂಭದಲ್ಲಿ ಕೆಲವು ಕಿತ್ತು ಹೋಗಿದ್ದವು. ರಿಪೇರಿ ಮಾ‌ಡಲಾಗಿತ್ತು. ಆದರೆ ಮತ್ತೆ ಹಲವಡೆ ಕಿತ್ತು ಹೋಗಿವೆ. ಆದರೆ ರಿಪೇರಿ ಮಾಡಿಲ್ಲ.
ಕೇವಲ ಆರು ತಿಂಗಳ ಒಳಗೆ ಹೀಗೆ ಕಿತ್ತು ಹೋದರೆ ಹೇಗೆ.  ಕಿತ್ತು ಹೋಗಿ ಎರಡು ತಿಂಗಳಾದರೂ  ದುರಸ್ತಿ ಮಾಡದೆ ನಿರ್ಲಕ್ಷ್ಯ ಧೋರಣೆ ತಳೆದಿದೆ.
ಬಳ್ಳಾರಿ ನಗರದಲ್ಲಿ ಈ ರೀತಿ ಕಳಪೆ ಕಾಮಗಾರಿ ಮಾಡುವುದು ಸರಿಯಲ್ಲ ಇದರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸಬಹುದು ದಯವಿಟ್ಟು ಸಂಬಂಧಪಟ್ಟ ಗುತ್ತಿಗೆದಾರರಿಗೆ ಮಾಹಿತಿ ತಿಳಿಸಿ ಸಂಪೂರ್ಣವಾಗಿ ರಿಪೇರಿ ಮಾಡಿಸ ಬೇಕೆಂದು ಸಾಮಾಜಿಕ ಹೋರಾಟಗಾರ ಆರ್ ವೆಂಕಟರೆಡ್ಡಿ  ಆಗ್ರಹಿಸಿದ್ದು. ಒಂದು ಕಾಮಗಾರಿ ಮಾಡಿದರೆ ಕನಿಷ್ಠ 10 ವರ್ಷ ಬಾಳಿಕೆ ಬರಬೇಕು  ಕೇವಲ ಆರು ತಿಂಗಳಿಗೆ ಈ ರೀತಿ ಕಳಪೆ ಕಾಮಗಾರಿ ಆದರೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಆಗುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
WhatsApp Group Join Now
Telegram Group Join Now
Share This Article