ನಾಳೆ ಅತಿದೊಡ್ಡ ರಾಣಿ ಚೆನ್ನಮ್ಮ ಕಂಚಿನ ಮೂರ್ತಿ ಅನಾವರಣ

Pratibha Boi
ನಾಳೆ ಅತಿದೊಡ್ಡ ರಾಣಿ ಚೆನ್ನಮ್ಮ ಕಂಚಿನ ಮೂರ್ತಿ ಅನಾವರಣ
Oplus_131072
WhatsApp Group Join Now
Telegram Group Join Now

ಮಹಾಲಿಂಗಪುರ,ಅ.೦೨ : ಸಮೀಪದ ಮಧಭಾಂವಿಯ ರಾಣಿ ಚನ್ನಮ್ಮ ಕಮೀಟಿ ಹಾಗೂ ರಬಕವಿ-ಬನಹಟ್ಟಿ ತಾಲೂಕಾ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಅ.೪ ರಂದು ಗ್ರಾಮದ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅತ್ಯಂತ ವೈಭವದಿಂದ ಕಿತ್ತೂರ ರಾಣಿ ಚೆನ್ನಮ್ಮನ ಅತಿ ದೊಡ್ಡ ಕಂಚಿನ ಮೂರ್ತಿಯ ಪ್ರತಿಷಪನೆ ಹಾಗೂ ಚೆನ್ನಮ್ಮ ಜಯಂತಿಯನ್ನು ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಗ್ರಾಮದ ಜನರ ಬಹುದಿನದ ಕನಸು.ಹಿರಿಯರು ಸಮಾಜದ ಯುವಕರು ವಿವಿಧ ಸಮಾಜ ಬಾಂಧವರು ಸ್ವತಂತ್ರಕ್ಕಾಗಿ ಹೋರಾಡಿದ ವೀರ ಮಹಿಳೆಯ ೨೦೧ನೇಯ ವಿಜಯೋತ್ಸವವನ್ನು ಈ ಸಂದರ್ಭದಲ್ಲಿ ಆಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ದಿವ್ಯ ಸಾನಿಧ್ಯ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ, ಸಾನಿಧ್ಯವನ್ನು ಪುರಿ ಜಗದ್ಗುರು ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು, ಭಗೀರಥ ಪೀಠ ಹೊಸದುರ್ಗ, ಪ.ಪೂ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು ಸಿದ್ದಶ್ರೀ ಸಿದ್ದಾಶ್ರಮ ಕೌಲಗುಡ್ಡ, ಶ್ರೀ ನಾಗಯ್ಯ ಮಠಪತಿ,ಅರ್ಚಕರು ಶ್ರೀ ಸದಾಶಿವ ದೇವಸ್ಥಾನ ಮದಭಾಂವಿ, ಘನ ಅಧ್ಯಕ್ಷತೆಯನ್ನು ವಿಜಯಪುರ ಶಾಸಕ ಬಸವನಗೌಡ ಆರ್.ಪಾಟೀಲ(ಯತ್ನಾಳ), ಅಧ್ಯಕ್ಷತೆ ಶ್ರೀಶೈಲ ದಲಾಲ,ಉದ್ಘಾಟಕರಾಗಿ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಕ. ಸವದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ವಿಧಾನ ಪರಿತ್ ಸದಸ್ಯರಾದ ಹನುಮಂತ ಆರ್ ನಿರಾಣಿ, ಮತ್ತು ಜ್ಯೋತಿ ಬೆಳಗಿಸಲು ಅಬಕಾರಿ ಸಚಿವರಾದ ಆರ್. ಬಿ ತಿಮ್ಮಾಪುರ, ಲೋಕಸಭಾ ಸದಸ್ಯರಾದ ಪಿ ಸಿ ಗದ್ದಿಗೌಡರ, ವಿಧಾನ ಪರಿ?ತ ಸದಸ್ಯರಾದ ಶ್ರೀಮತಿ ಉಮಾಶ್ರೀ,ವಿಧಾನ ಪರಿಷತ ಸದಸ್ಯರಾದ ವಿ ಪಿ ಎಚ್ ಪೂಜಾರ ವಿಧಾನ ಪರಿಷತ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪಂಚಮಸಾಲಿ ಸಮಾಜ ಜಿಲ್ಲಾ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ ಮತ್ತು ಧ್ವಜಾರೋಹಣವನ್ನು ಅರಬಾಂವಿ ಮತಕ್ಷೇತ್ರ ಶಾಸಕ ಬಾಲಚಂದ್ರ ಜಾರಕಿಹೊಳಿ,ಶಾಸಕ ಜಗದೀಶ ಗುಡಗುಂಟಿಮಠ, ಕಿಸಾನ ಕಾಂಗ್ರೆಸ್ ಘಟಕ ಸಂಚಾಲಕ ಸಿದ್ದು ಕೊಣ್ಣೂರ,ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ನ್ಯಾಯವಾದಿ ಅರ್ಜುನ ಹಲಗಿಗೌಡರ, ಪ್ರಥಮ ದರ್ಜೆ ಗುತ್ತಿಗೆದಾರರು, ಮಹಾಂತೇಶ ಉರಬಿನ್ನವರ ನೆರವೇರಸಲಿದ್ದು. ಮುಖ್ಯ ಅತಿಥಿಗಳಾಗಿ ಸದಾಶಿವ ಪಟ್ಟಣಶೆಟ್ಟಿ, ಡಾ ಏ ಆರ್ ಬೆಳಗಲಿ, ಮಹಾದೇವ ಮಾರಪೂರ, ಸಿದ್ದುಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ಬಸವರಾಜ ನಾಗನೂರ, ಚೆನ್ನಪ್ಪ ಪಟ್ಟಣಶೆಟ್ಟಿ, ವಿನೋದ ಉಳ್ಳಾಗಡಿ, ಶ್ರೀಶೈಲ ಅರಭಾಂವಿ, ಸುಭಾಸ ಪಾಟೀಲ ಆಗಮಿಸಲಿದ್ದಾರೆಂದು ರಾಣಿ ಚೆನ್ನಮ್ಮ ಕಮೀಟಿ ಉಪಾಧ್ಯಕ್ಷ ಶ್ರೀಶೈಲ ಒಂಟಿ, ಶಿವಪ್ಪ ಉರಬಿನ್ನವರ,ಪರಸಪ್ಪ ಉರಬಿನ್ನವರ,ಮಲ್ಲಪ್ಪ ಉರಬಿನ್ನವರ,ಅಜೀತ ಹಾದಿಮನಿ ಸದಸ್ಯರು,ಸಮಾಜದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article