ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿತ್ತು: ಸಚಿವ ಸತೀಶ ಜಾರಕಿಹೊಳಿ

Ravi Talawar
ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿತ್ತು: ಸಚಿವ ಸತೀಶ ಜಾರಕಿಹೊಳಿ
WhatsApp Group Join Now
Telegram Group Join Now

ಬೆಳಗಾವಿ, ಆ.೧೫(ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರ್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಪಾತ್ರವು ಕಡಿಮೆ ಇಲ್ಲ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಶುಕ್ರವಾರ (ಆ.೧೫) ೭೯ನೇ ಸ್ವಾತಂತ್ರೋತ್ಸವ ದಿನದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೇರವೆರಿಸಿ ಅವರು ಮಾತನಾಡಿದರು.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಇಟ್ಟಿದೆ. ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ ರಾಜ್ಯದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಪಥ ಸಂಚಲನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೆರಿಸಿ ಪೊಲಿಸ್, ಅಗ್ನಿಶಾಮಕ ಸೇರಿದಂತೆ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ತದ ನಂತರ ಆರ್.ಪಿ.ಐ ಜೆ.ಹೆಚ್.ಶೇಖ ಅವರ ನೇತೃತ್ವದಲ್ಲಿ ಜರುಗಿದ ಸಿ.ಎ.ಆರ್.ಡಿ.ಎ.ಆರ್., ಮಹಿಳಾ ಹಾಗೂ ಪುರುಷ ನಾಗರಿಕ ಪೋಲಿಸ್ ತುಕಡಿ, ಗೃಹರಕ್ಷಕ ದಳ, ಮಹಿಳಾ ಹಾಗೂ ಪುರುಷ ಕೆ.ಎಸ್.ಆರ್.ಪಿ ಪಡೆ, ಅಬಕಾರಿ ಇಲಾಖೆ, ಅಗ್ನಿಶಾಮಕ ಇಲಾಖೆ, ಎಸ್.ಸಿ.ಸಿ. ಬಾಯ್ಸ್ ಮತ್ತು ಗರ್ಲ್ಸ, ಪೌರ ಕಾರ್ಮಿಕರು, ಅಗಸಗಾ ಎಸ್.ಎಲ್.ವಿ.ಕೆ. ಪ್ರೌಢ ಶಾಲೆಯ ಭಾರತ ಸೇವಾದಳ, ಲಿಟಲ್ ಸ್ಕಾಲರ್ ಅಕಾಡಮಿ, ವನಿತಾ ವಿದ್ಯಾಲಯ, ಕ್ಯಾಂಟೋನಮೆಂಟ್ ಪ್ರೌಢಶಾಲೆ, ಸೆಂಟ ಜೊಸೆಫ ಪ್ರೌಢಶಾಲೆ, ಮಾರಾಠ ಮಂಡಳ ಸೆಂಟ್ರಲ್ ಪ್ರೌಢಶಾಲೆ,, ಕೆ.ಎಲ್.ಇ. ಇಂಟನ್ಯಾಸನಲ್ ಪ್ರೌಢಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಚಂಪಾಬಾಯಿ ಭೋಗಲೆ ಬಾಲಕಿಯರ ಪ್ರೌಢಶಾಲೆ, ಕೆ.ಎಸ್.ಆರ್.ಪಿ ಮಚ್ಛೆ ಪ್ರೌಢ ಸಾಲೆ, ಬೆಳಗಾವಿ ಪಬ್ಲಿಕ ಸ್ಕೂಲ್, ಸರಕಾರಿ ಪ್ರೌಢಶಾಲೆ ಕಂಗ್ರಾಳಿ, ಬಿ.ಕೆ, ವಂಟಮೂರಿ, ಮಹೇಶ್ವರಿ ಅಂಧ ಮಕ್ಕಳ ಶಾಲಾ ವಿಧ್ಯಾರ್ಥಿಗಳ ತಂಡಗಳ ಆಕರ್ಷಕ ಪಥ ಸಂಚಲನ ಸಭಿಕರ ಪ್ರಶಂಸೆಗೆ ಪಾತ್ರವಾದವು.

ಸನ್ಮಾನಿತರು: ೭೯ನೇ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಕಾರ್ಯಕ್ರಮಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದದ ಜಿಲ್ಲೆಯ ಸಾಧಕರಿಗೆ ಸನ್ಮಾನಿಸಲಾಯಿತು. ಸಾವಯವ ಕೃಷಿಯಲ್ಲಿ ಸಾಧನೆಗೈದ ತುಕಾರಾಮ ಮಾರುತಿ ನಾಯಿಕ, ಶ್ರೀಮತಿ ಲಕ್ಷ್ಮೀ ಲೋಕೂರ, ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ಸುಶಿಲಾದೇವಿ ರಾಮನ್ನವರ, ಫಜಲ್, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ವಿ ಹೇಮಂತ ಪಾಟೀಲ, ರೂಪಾ ಚನ್ನಗೌಡ ಪಾಟೀಲ, ಕ್ರೀಡಾ ಕ್ಷೇತ್ರದಲ್ಲಿ ಸಾಕ್ಷಿ ಮಲ್ಲು ಪಾಟೀಲ, ಚಿನ್ಮಯ ಕ್ಯಾಮಣ್ಣವರ, ಸೊನಮ ಮಲ್ಲು ಪಾಟೀಲ, ಅಮೋಘ ತಂಗಡಿ, ರಮ್ಯಾ ಲಮಾಣಿ, ಪ್ರಜ್ವಲ ಹನುಮನಟ್ಟಿ, ಸೌಂದರ್ಯ ದಂಡಿನವರ, ಸುಕೃತ ಯಳಹಟ್ಟಿ, ಸುದರ್ಶನ ಗುರವ, ವಿನೋದ ಮೇತ್ರಿ, ತನಿಷ್ಕಾ ಕಾಲಬೈರವ, ಬಿ.ವಿ.ಕಿರಣ, ಸರಣ್ಯಾ ಕುಂಬಾರ, ಸ್ವಾತಿ ಪಾಟೀಲ, ಸಂಜನಾ ಶೇಟ್, ತೀರ್ಥ ಪಾಚ್ಚಾಪೂರ, ಸಾಯಿಶ್ವರಿ ಜೆ.ಕೆ, ಗಂಗಯ್ಯ ಚಿಕ್ಕಮಠ, ಮಲ್ಲಿಕಾರ್ಜುನ ಬಬಲಿ, ಸುಧಾಕರ ಚಳಕೆ, ತನೋಜ ಸಿಂಗ್, ಗಾಯತ್ರಿ ಬೆಳಗಾವಿ, ಸುರೇಶ ಲಂಗೋಟಿ, ಯುವರಾಜ ಮೋಹನೆಕರ ಅವರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಸೇರಿದಂತೆ ಗಣ್ಯರು ಸನ್ಮಾನಿಸಿದರು.
ಶಾಸಕರಾದ ಆಸೀಫ್(ರಾಜು) ಸೇಠ, ಮಹಾನಗರ ಪಾಲಿಕೆ ಮಹಾಪೌರ ಮಂಗೇಶ ಪವಾರ, ಉಪ ಮಹಾಪೌರೆ ವಾಣಿ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ, ನಗರ ಸೇವಕರು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೋಲಿಸ್ ಆಯುಕ್ತ ಭೂಷಣ ಗುಲಾಬರಾವ್ ಭೋರಸೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾನರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ್, ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ-ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮ ದಿನಾಚರಣೆ ಅಂಗವಾಗಿ ನ್ಯಾಯಾಲಯ ಆವರಣದ ಸಂಗೊಳ್ಳಿ ರಾಯಣ್ಣ ಹಾಗೂ ಚನ್ನಮ್ಮ ವೃತ್ತದ ಕಿತೂರು ರಾಣಿ ಚನ್ನಮ್ಮ ಅವರುಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

 

WhatsApp Group Join Now
Telegram Group Join Now
Share This Article