ದರ್ಶನ್​ ಬೇಡಿಕೆಯ ಹಿನ್ನೆಲೆ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡಲು ಪೊಲೀಸರು ತಯಾರಿ

Ravi Talawar
ದರ್ಶನ್​ ಬೇಡಿಕೆಯ ಹಿನ್ನೆಲೆ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡಲು ಪೊಲೀಸರು ತಯಾರಿ
WhatsApp Group Join Now
Telegram Group Join Now

ಬಳ್ಳಾರಿ: ನಟ ದರ್ಶನ್​ ಬೇಡಿಕೆಯ ಹಿನ್ನೆಲೆಯಲ್ಲಿ ಅವರಿರುವ 15ನೇ ಸೆಲ್​ಗೆ ಟಿವಿ ನೀಡಲು ಜೈಲಾಧಿಕಾರಿಗಳು ಸಿದ್ಧತೆ ಮಾಡಿದ್ದಾರೆ. ಹೊಸ ಟಿವಿಯನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತಿವಾರವೂ ವೈದ್ಯರು ಕೈದಿಗಳ ಆರೋಗ್ಯ ಪರಿಶೀಲನೆ ಮಾಡುತ್ತಿದ್ದು, ಇಂದು 385 ಕೈದಿಗಳ ಜೊತೆಗೆ ದರ್ಶನ್​ ಅವರ ಆರೋಗ್ಯವನ್ನೂ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಟನ ಆರೋಗ್ಯ ಸ್ಥಿರವಾಗಿದ್ದು, ಬಿಪಿ, ಶುಗರ್​ ನಾರ್ಮಲ್​ ಆಗಿದೆ ಎಂದು ತಿಳಿದುಬಂದಿದೆ.

ಸರ್ಜಿಕಲ್ ಚೇರ್ ವ್ಯವಸ್ಥೆ: ಇತ್ತೀಚೆಗೆ ದರ್ಶನ್​ ಮನವಿ ಮೇರೆಗೆ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಸ್ಪತ್ರೆಯಿಂದ ಬಳ್ಳಾರಿ ಸೆಂಟ್ರಲ್​ ಜೈಲಿಗೆ ಸರ್ಜಿಕಲ್ ಚೇರ್ ತರಿಸಲಾಗಿದೆ. ತಮಗೆ ಬೆನ್ನೆಲುಬು ಸಮಸ್ಯೆ ಇದೆ. ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇರುವುದರಿಂದ ಶೌಚಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ಸರ್ಜಿಕಲ್ ಚೇರ್ ನೀಡಬೇಕು ಎಂದು​ ಡಿಐಜಿ ಬಳಿ ದರ್ಶನ್​ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಮೆಡಿಕಲ್​ ರೆಕಾರ್ಡ್​ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಪರಿಶೀಲಿಸುತ್ತಾರೆ. ಆ ನಂತರ ಅಗತ್ಯ ಸೌಲಭ್ಯ ಕೊಡಲಾಗುತ್ತದೆ. ಅವಶ್ಯಕತೆ ಇದ್ದರೆ ದರ್ಶನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್​ಗೂ ಕೊಡಿಸುತ್ತೇವೆ ಎಂದು ಡಿಐಜಿ ಹೇಳಿದ್ದರು.

WhatsApp Group Join Now
Telegram Group Join Now
Share This Article