ಕಾರವಾರ, ಸೆಪ್ಟೆಂಬರ್ 18: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ದನಗಳ ರಾಶಿ ಅಸ್ಥಿಪಂಜರ ಸಿಕ್ಕಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಹಲವು ಊರುಗಳಲ್ಲಿ ಕದ್ದ ಗೋವುಗಳನ್ನು ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿದಲ್ಲಿ ಹಾಕಿ ಪರಾರಿಯಾಗುತಿದ್ದರು ಎಂಬುದು ಇದೀಗ ಗೊತ್ತಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿರುವ ಪೊಲೀಸರು, ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಸ್ಥಳಕ್ಕೆ ತೆರಳಿದ್ದ ಪೊಲೀಸರು, ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗೋವುಗಳ ಮೂಳೆ ಇರುವುದನ್ನು ಪತ್ತೆ ಮಾಡಿದ್ದರು. ಬೆಳ್ನೆ ಭಾಗದ ಅರಣ್ಯಾಧಿಕಾರಿ ಭಟ್ಕಳ ಶಹರ ಠಾಣೆಯಲ್ಲಿ ದೂರು ನೀಡಿದ್ದು, ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಎರಡು ತಂಡಗಳನ್ನು ಮಾಡಿ ತನಿಖೆ ಕೈಗೊಳ್ಳಲಾಗಿತ್ತು. ಇದೀಗ ಭಟ್ಕಳದ ಮೊಹ್ಮದ್ ಸಮಾನ್, ಮಹಮ್ಮದ್ ರಾಹೀನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.