“ಆಕ್ಟಿಜನ್ ಕ್ಲಬ್ ಕಾರ್ಯಕ್ರಮ ಶ್ಲಾಘನೀಯ”

Ravi Talawar
“ಆಕ್ಟಿಜನ್ ಕ್ಲಬ್ ಕಾರ್ಯಕ್ರಮ ಶ್ಲಾಘನೀಯ”
WhatsApp Group Join Now
Telegram Group Join Now
ಸವದತ್ತಿ: ದೇಶ ಅಪ್ನಾಯೆನ್ ಸಹಯೋಗ ಪೌಂಡೇಶನದಿಂದ “ಆಕ್ಟಿಜನ್ ಕ್ಲಬ್  ” ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗೊರಗುದ್ದಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಆಯೋಜಿಸಿದ
6ನೇ ತರಗತಿಯ ಮಕ್ಕಳಿಗೆ ಅಣುಕು ಚುನಾವಣೆ,ಪರಸ್ಪರ ಅವಲಂಬನೆ,ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು,ಡ್ಯೂಟಿ ಬಾಂಡ್ ಈ ಮೇಲಿನ 5 ಹಂತದ ಚಟುವಟಿಕೆಗಳನ್ನು “ಆಕ್ಟಿಜನ್ ಕ್ಲಬ್ ” ಸಹಯೋಗದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ ಸಹಾಯದಿಂದ ಶ್ರೀಮತಿ ವೈಶಾಲಿ ಕಿಚಡಿ ನಡೆಸಿಕೊಟ್ಟರು.
ಇದೇ ರೀತಿಯಾಗಿ ಸವದತ್ತಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಲ್ಲಿ “ಆಕ್ಟಿಜನ್ ಕ್ಲಬ್ ” ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಧಾನ ಗುರುಗಳಾದ ಮಹಾಂತೇಶ ಹೊಂಗಲ ಮತ್ತು ಸಹಶಿಕ್ಷಕರಾದ  ಪ್ರವೀಣ ಜೆಟ್ಟೆಣ್ಣವರ ಸಹಾಯದಿಂದ ಚಟುವಟಿಕೆಯನ್ನು ಯಶಸ್ವಿಯಾಗಿ ಮಕ್ಕಳಿಗೆ ಮಾಡಿಸಲಾಯಿತು. ಶಿಕ್ಷಕರಾದ  ಎ ಬಿ. ಕಬ್ಬೂರ, ಶ್ರೀಮತಿ ವಿಜಯಾ ಲಕ್ಷ್ಮಟ್ಟಿ, ಶ್ರೀಮತಿ ವಂದನಾ ಉಪಾಧ್ಯೆ, ಶ್ರೀ ಶ್ರೀಧರ ಯಳಕರ,  ರಾಜು ಹಮ್ಮನವರ, ರಾಮಸಿದ್ದ  ಖನಗಾರ,  ಚಿದಾನಂದ ಬಯ್ಯಾರ, ಗೀತಾ ಗುಜನಾಳ  ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article