ಹುನಗುಂದ: ಪಟ್ಟಣದ ಮೇಗಲಪೇಟೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹಿಂಭಾಗದ ಗುಡ್ಡಕ್ಕೆ ಗುರವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಗುಡ್ಡದ ಕೆಳಭಾಗದಲ್ಲಿದ್ದ ಸುಮಾರು ೫೦ಕ್ಕೂ ಹೆಚ್ಚು ರೈತರ ಮೇವು ಮತ್ತು ಹೊಟ್ಟಿನ ಬಣ್ಣಿಮೆ, ಐದಾರು ಮನೆಗಳಿಗಾಗುವ ಅನಾಹುತ ತಪ್ಪಿದೆ.
ಕಿಡಿಗೇಡಿ ಸೇದಿ ಎಸೆದ ಬೀಡಿ-ಸಿಗರೇಟ್ ತುಣುಕಿನಿಂದಲೂ ಅನಾಹುತ ಸಂಭವಿಸಿರಬಹುದು. ಎಂದು ಶಂಕಿಸಲಾಗಿದೆ. ಗುಡ್ಡದಲ್ಲಿ ಹುಲ್ಲು ಬೆಳೆದಿತ್ತು. ಬಿಸಿಲಿಗೆ ಒಣಗಿ ನಿಂತಿದ್ದ ಈ ಹುಲ್ಲಿಗೆ ಹೊತ್ತಿಕೊಂಡ ಬೆಂಕಿ ಕ್ಷಣಾರ್ಥದಲ್ಲಿ ಅರ್ಧಕ್ಕೂ ಹೆಚ್ಚು ಗುಡ್ಡ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಗುಡ್ಡದ ಕೆಳಭಾಗದಲ್ಲಿರುವ ಬಣವಿಗಳಿಗೆ ಬೆಂಕಿ ಹೊತ್ತುಕೊಳ್ಳುತ್ತೆ ಎಂದುಕೊಂಡ ಅಲ್ಲೀನ ಸ್ಥಳೀಯರು ಕೊಡಾ ಮತ್ತು ಬಾಕಿಟ್ ಮೂಲಕ ನೀರನ್ನು ತೆಗೆದುಕೊಂಡು ಬೆಂಕಿಯನ್ನು ಹಾರಿಸಲು ಮುಂದಾದಾಗ ಗುಡ್ಡಕ್ಕೆ ಹೊತ್ತಿಕೊಂಡ ಬೆಂಕಿ ಪ್ರಖರತೆ ಹೆಚ್ಚಾಗಿದ್ದನ್ನು ಮನಗಂಡು ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಎಎಫ್‌ಎಸ್‌ಒ ಪ್ರಕಾಶ ಚಿತ್ತರಗಿ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸುವ ಪೂರ್ವದಲ್ಲಿ ಗುಡ್ಡದಲ್ಲೀನ ಅನೇಕ ಗಿಡಮರಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಬೆಂಕಿಯ ಅನಾಹುತವನ್ನು ಸರಿಯಾದ ಸಮಯಕ್ಕೆ ಆಗಮಿಸಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಕ್ಷಮತೆಯ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮೆಚ್ಚುಗೆಯನ್ನು
ಹುನಗುಂದ-ಇಳಕಲ್ಲ ಅಗ್ನಿಶಾಮಕ ದಳದ ಎಎಫ್‌ಎಸ್‌ಒ ಪ್ರಕಾಶ ಚಿತ್ತರಗಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಅಗ್ನಿಶಾಮಕ ಸಿಬ್ಬಂದಿಗಳಾದ ಭೀಮಪ್ಪ ಮನ್ನಿಹಾಳ, ಖಾಜೇಸಾಬ ಗೊಂದುಗುಳಿ, ರವಿಚಂದ್ರ, ಮಲ್ಲೇಶ್ ಡಂಬಳ, ದೊಡೇಶ ಇದ್ದರು.


