ಸಂವಿಧಾನ ಗೌರವಿಸಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ- ಮಾರುತಿ ನಾಯ್ಕ

Sandeep Malannavar
ಸಂವಿಧಾನ ಗೌರವಿಸಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ- ಮಾರುತಿ ನಾಯ್ಕ
WhatsApp Group Join Now
Telegram Group Join Now
ವಿಜಯಪುರ : ನಾಗರಾಳೆ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ನಾಗರಾಳೆ ಪಬ್ಲಿಕ್ ಶಾಲೆಯಲ್ಲಿ ೭೭ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರದ ಪಂಡರಾಪೂರ ಶರತಚಂದ್ರ ಪವಾರ್ ಕಾಲೇಜಿನ ಪ್ರಾಧ್ಯಾಪಕರಾದ ಮಾರುತಿ ನಾಯ್ಕ ಧ್ವಜರೋಹಣ ಮಾಡಿ ಮಾತನಾಡುತ್ತ  ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಭಾರತದ ಪ್ರಜಾಪ್ರಭುತ್ವ ಸದೃಢವಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ, ಮತದಾನ ಇವುಗಳ ಮೌಲ್ಯವನ್ನು ಭಾರತದ ಪ್ರತಿಯೊಬ್ಬ ಜನರು ತಿಳಿದುಕೊಳ್ಳಬೇಕು. ಸಾಕಷ್ಟು ಮಹನೀಯರು ದೇಶ ಸ್ವಾತಂತ್ರ್ಯಗಳಿಸಲು ತಮ್ಮ ಜೀವವನ್ನು ನೀಡಿದ್ದಾರೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮೌಲ್ಯ ಹಾಗೂ ಆಶಯಗಳನ್ನು ಗೌರವಿಸಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದರು. ಜಾತಿ ಮತ ಪರಿಗಣನೆ ಮಾಡದೆ ಮತ ಚಲಾಯಿಸಿದರೆ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯ. ಸಂವಿಧಾನ ವನ್ನು ಓಧಿ ಅರ್ಥ ಮಾಡಿಕೊಂಡು ಅದನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದರು.
ಈ ಸಮಯದಲ್ಲಿ ಶಿಕ್ಷಕಿಯರಾದ ವಿಜಯಲಕ್ಷ್ಮೀ ಬಿರಾದಾರ, ಗೀತಾ ಹಂದರಗಲ್, ಸಂಗೀತಾ ಆಲಮೇಲ್, ಪೂಜಾ ಬಿರಾದಾರ, ನಮ್ರತಾ ಅಂಜಿಬಾನೆ, ಅಪೂರ್ವ ಬಬಲೇಶ್ವರ, ರಾಜೇಶ್ವರಿ ಉಕುಮನಾಳ, ಭುವನೇಶ್ವರಿ ಚಲವಾದಿ, ಅಮ್ರತಾ ಅಂಜಿಕಾನೆ, ಸೌಂದರ್ಯ ಪಟ್ಟಣಶೆಟ್ಟಿ, ನಮೀತಾ ಸುವೀಮಠ ಹಾಗೂ ಪ್ರೀಯಾಂಕಾ ಚವ್ಹಾಣ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಚಿಕ್ಕ ಮಕ್ಕಳಿಂದ, ಗಾಂಧಿ, ನೆಹರು, ಸುಭಾಶ್ಚಂದ್ರ ಬೋಸ್, ವೇಷಗಳನ್ನು ಧರಿಸಿ ಭಕ್ತಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ ಜರುಗಿದವು.
WhatsApp Group Join Now
Telegram Group Join Now
Share This Article