ಶಿವಾನಂದ ಮಹಾವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರö್ಯ ದಿನಾಚರಣೆ 

Pratibha Boi
ಶಿವಾನಂದ ಮಹಾವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರö್ಯ ದಿನಾಚರಣೆ 
WhatsApp Group Join Now
Telegram Group Join Now
ಕಾಗವಾಡಇಂದು ನಾವು ಶಾಂತಿಯುತವಾಗಿ ಬದುಕಬೇಕಾಗಿದ್ದರೆ ಅದರ ಹಿಂದೆ ಹಲವು ಸ್ವಾತಂತ್ರö್ಯ ಹೋರಾಟಗಾರರ ಹಾಗೂ ಸೈನಿಕರ ತ್ಯಾಗ, ಬಲಿದಾನವಿದೆ. ಭಾರತ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾತಂತ್ರö್ಯವನ್ನು ಅನುಭವಿಸುತ್ತಿದೆ ಎಂದರೆ ಅದು ಸ್ವಾತಂತ್ರö್ಯ ಹೋರಾಟಗಾರರ ಅವಿರತ ಶ್ರಮದ ಫಲ ಎಂದು ಶಿವಾನಂದ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಮೇಜರ್.ವಿ.ಎಸ್.ತುಗಶೆಟ್ಟಿ ಅವರು ೭೯ನೇ ಸ್ವಾತಂತ್ರö್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಪಿ.ತಳವಾರ ಮಾತನಾಡಿ ಇವತ್ತಿನ ಸ್ವಾತಂತ್ರö್ಯ ದಿನಾಚರಣೆ ನಮ್ಮೆಲ್ಲರ ರಾಷ್ಟಿçÃಯ ಹಬ್ಬ ಇದನ್ನು ನಾವು ಜಾತಿ,ಮತ,ಪಂಗಡ ಬಿಟ್ಟು ಒಗ್ಗಟ್ಟಾಗಿ ಆಚರಿಸೋಣ ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ.ಬಿ.ಎ.ಪಾಟೀಲ, ಪದವಿ ಪೂರ್ವ ಪ್ರಾಚಾರ್ಯರಾದ ಪ್ರೊ.ಪಿ.ಬಿ.ನಂದಾಳೆ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ಪ್ರೊ.ಆರ್.ಎಸ್.ನಾಗರಡ್ಡಿ, ಎನ್‌ಸಿಸಿ ಅಧಿಕಾರಿಗಳಾದ ಲೇ.ಎ.ಆರ್.ಅಳಗೊಂಡಿ, ಯೂಥ್ ರೆಡ್‌ಕ್ರಾಸ್ ಅಧಿಕಾರಿಗಳಾದ ಪ್ರೊ.ಮಿಸ್. ಎಸ್.ಎಸ್.ಫಡತರೆ ಉಪಸ್ಥಿರಿದ್ದರು.
 ಪ್ರಾರಂಭದಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ ಸ್ವಾಗತಿಸಿದರು. ಎನ್‌ಎಸ್‌ಎಸ್ ಘಟಕ-೨ ರ ಅಧಿಕಾರಿಗಳಾದ ಪ್ರೊ.ಎ.ಎ.ಪಾಟೀಲ ವಂದಿಸಿದರು. ಎನ್‌ಎಸ್‌ಎಸ್ ಘಟಕ-೧ರ ಅಧಿಕಾರಿಗಳಾದ ಡಾ.ಚಂದ್ರಶೇಖರ ವೈ ನಿರೂಪಿಸಿದರು. ಈ ಸಂದರ್ಭದಲ್ಲಿ ಎನ್‌ಸಿಸಿ ಕೆಡೆಟ್ಸ್, ಎನ್‌ಎಸ್‌ಎಸ್ ಸ್ವಯಂ ಸೇವಕ-ಸೇವಕರಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ಮತ್ತು ರೇಂಜರಗಳು ಪಥ ಸಂಚಲನ ಮಾಡಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article