ಜಿಎಸ್‌ಟಿಮಂಡಳಿಯ 56 ನೇ ಸಭೆ ಇಂದು ದೆಹಲಿಯಲ್ಲಿ ಆರಂಭ; ಗರಿಗೆದರಿದ ನಿರೀಕ್ಷೆಗಳು

Ravi Talawar
ಜಿಎಸ್‌ಟಿಮಂಡಳಿಯ 56 ನೇ ಸಭೆ ಇಂದು ದೆಹಲಿಯಲ್ಲಿ ಆರಂಭ; ಗರಿಗೆದರಿದ ನಿರೀಕ್ಷೆಗಳು
WhatsApp Group Join Now
Telegram Group Join Now

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 56 ನೇ ಸಭೆ ಇಂದು ರಾಷ್ಟ್ರ ರಾಜಧಾನಿಯಲ್ಲಿ ಆರಂಭವಾಗಲಿದ್ದು, ಸೆಪ್ಟೆಂಬರ್ 3 ರಿಂದ 4 ರವರೆಗೆ ಎರಡು ದಿನಗಳವರೆಗೆ ನಡೆಯಲಿದೆ. ಅನುಸರಣೆಯನ್ನು ಸರಳೀಕರಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿರುವ ಸರ್ಕಾರ, ಪ್ರಸ್ತುತ ಇರುವ ನಾಲ್ಕು ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಕೇವಲ ಎರಡಕ್ಕೆ ಇಳಿಸುವ ಮೂಲಕ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಮಂಡಳಿ ನಿರ್ಧರಿಸುವ ಸಾಧ್ಯತೆಗಳಿವೆ. ಹೀಗಾಗಿ ನಿರೀಕ್ಷೆಗಳು ಗರಿಗೆದರಿವೆ.

ಸರ್ಕಾರಿ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಶೇ. 12 ಮತ್ತು ಶೇ. 28 ಜಿಎಸ್‌ಟಿ ದರಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದ್ದು, ಶೇ. 5 ಮತ್ತು ಶೇ. 18 ಜಿಎಸ್‌ಟಿ ದರಗಳನ್ನು ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಉಪಕ್ರಮದ ಭಾಗವಾಗಿ ಶೇಕಡಾ 12 ರಷ್ಟು ತೆರಿಗೆ ಸ್ಲ್ಯಾಬ್‌ನ ಶೇಕಡಾ 99 ರಷ್ಟು ತೆರಿಗೆಯನ್ನು ಶೇಕಡಾ 5ರ ಸ್ಲಾಬ್​​ ಗೆ ತರುವ ಸಾಧ್ಯತೆಗಳಿವೆ. ಇನ್ನು ಶೇಕಡಾ 28 ರಷ್ಟು ತೆರಿಗೆ ಸ್ಲ್ಯಾಬ್‌ನಲ್ಲಿರುವ ಶೇಕಡಾ 90 ರಷ್ಟು ವಸ್ತುಗಳನ್ನು ಶೇಕಡಾ 18 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ದೀಪಾವಳಿಯಂದು ಜನರಿಗೆ ಬಹಳ ದೊಡ್ಡ ಉಡುಗೊರೆ ಸಿಗಲಿದೆ ಎಂದು ಘೋಷಿಸಿದ್ದರು. ಅವರ ಘೋಷಣೆಯ ಕೆಲವು ದಿನಗಳ ನಂತರ ಸರ್ಕಾರವು ಜಿಎಸ್‌ಟಿಯ ದೊಡ್ಡ ಸುಧಾರಣೆಗೆ ನಿರ್ಧಾರ ಕೈಗೊಂಡಿದೆ. ಆ ಬಳಿಕ ಈಗ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article