ದಿ. 12 ರಿಂದ ಅವಧೂತ ಗಾಳೇಶ್ವರ ಮಠದ  51 ನೇ ಜಾತ್ರಾ ಮಹೋತ್ಸವ ಪ್ರಾರಂಭ

Ravi Talawar
ದಿ. 12 ರಿಂದ ಅವಧೂತ ಗಾಳೇಶ್ವರ ಮಠದ  51 ನೇ ಜಾತ್ರಾ ಮಹೋತ್ಸವ ಪ್ರಾರಂಭ
WhatsApp Group Join Now
Telegram Group Join Now
ನೇಸರಗಿ: ಫೆ.09.ಮಲ್ಲಾಪೂರ ಕೆ ಎನ್- ನೇಸರಗಿ  ಗ್ರಾಮದ ಪ್ರತಿಷ್ಠಿತ ಅವಧೂತ ಗಾಳೇಶ್ವರ ಮಠದ 51 ನೇ ಜಾತ್ರಾ ಮಹೋತ್ಸವವು ಬುಧವಾರ ದಿ. 12-02-2025 ರಂದು ಪ್ರಾರಂಭವಾಗಲಿದ್ದು ಅಂದು ಕರ್ತು ಗದ್ದಿಗೆಗಳಿಗೆ ರುದ್ರಾಭಿಷೇಕ ಸಂಜೆ 7 ಕ್ಕೆ ಅಗ್ನಿಪೂಜೆ ನೆರವೇರುವದು, ಸಂಜೆ 6 ಕ್ಕೆ ಕಳಸರೋಹಣ ನಂತರ ವೇದಾಂತ ಪರಿಷತ್ ನಡೆಯುವದು.
ದಿ. 13, 14,15 ರಂದು ಪ್ರತಿದಿನ ಪ್ರವಚನ ಕಾರ್ಯಕ್ರಮ ಜರುಗುವವು. ರವಿವಾರ ದಿ. 16-2-2025 ರಂದು ಮದ್ಯಾಹ್ನ 12 ಕ್ಕೆ ಸಾಮೂಹಿಕ ವಿವಾಹ ನಂತರ ಮಹಾಪ್ರಸಾದ, ಸಂಜೆ 5 ಘಂಟೆಗೆ ಮಹಾ  ರಥೋತ್ಸವ ಜರುಗುವದು, ರಾತ್ರಿ  ಕುಳ್ಳೂರ ಇವರಿಂದ ಶ್ರೀ ಶಿವಯೋಗಿಶ್ವರ ಗಿಗಿಮೇಳ ನಡೆಯಲಿದೆ.  ದಿ 12 ರಿಂದ ದಿ 16 ರ ವರೆಗೆ  ಧನಗಳ ಪ್ರದರ್ಶನ ಇದ್ದು 5 ಉತ್ತಮ ಜೋಡಿ ಧನಗಳಿಗೆ ಬಹುಮಾನ ವಿತರಿಸಲಾಗುವದು
ದಿ. 12 ರಿಂದ 16 ರವರೆಗೆ ಬೆಳಿಗ್ಗೆ ಶೀಲಾ ಮೂರ್ತಿಗಳಿಗೆ ರುದ್ರಾಭಿಷೇಕ, ರಾತ್ರಿ ಸುತ್ತಮುತ್ತಲಿನ ಗ್ರಾಮಗಳ  ಶರಣರಿಂದ ಭಜನಾ ಪದ, ರಾತ್ರಿ ಮಹಾಪ್ರಸಾದ ನಡೆಯುವದು.  ಈ ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಸುಕ್ಷೇತ್ರ ಇಂಚಲ ಇವರು ವಹಿಸುವರು. ಕಾರ್ಯಕ್ರಮದ ಸಾನಿಧ್ಯವನ್ನು ಗಾಳೇಶ್ವರ ಮಠದ ಪರಮಪೂಜ್ಯ ಶ್ರೀ ಚಿದಾನಂದ ಮಹಾಸ್ವಾಮಿಗಳು ವಹಿಸುವರು
ಈ ಜಾತ್ರಾ ಮಹೋತ್ಸವಕ್ಕೆ  ಬೈಲಹೊಂಗಲ ಶ್ರೀ ಮಹಾದೇವ ಸ್ವಾಮಿಗಳು, ಹರಳಕಟ್ಟಿಯ ಶ್ರೀ ನಿಜಗುಣ ಶ್ರೀಗಳು, ಕುಳ್ಳುರಿನ ಶ್ರೀ ಬಸವರಾಜ ಭಾರತಿ ಶ್ರೀಗಳು, ಹಂಪಿ ಯ ವಿದ್ಯಾನಂದ ಭಾರತಿ ಶ್ರೀಗಳು, ತೊಂಡಿಕಟ್ಟಿಯ ಅಭಿನವ ವೆಂಕಟೇಶ್ವರ ಶ್ರೀಗಳು, ಹುಣಶ್ಯಾಳದ ಶ್ರೀ ನಿಜಗುಣದೇವ ಶ್ರೀಗಳು, ದತ್ತವಾಡದ ಹೃಷಕೇಶಾನಂದ ಬಾಬಾ ಶ್ರೀಗಳು, ಹುಬ್ಬಳ್ಳಿಯ ಶ್ರೀ ಸಚ್ಚಿದನಂದ ಶ್ರೀಗಳು, ಹುಲಗೇರಿಯ ವೀರಯ್ಯ ಶ್ರೀಗಳು, ಕೊಟಭಾಗಿಯ ಪ್ರಭು ಶ್ರೀಗಳು, ಸವಟಗಿಯ  ನಿಂಗಯ್ಯ ಶ್ರೀಗಳು, ಹಡಗಿನಾಳದ ಮಲ್ಲೇಶ್ವರ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article