ಬಳ್ಳಾರಿ23.:ಶ್ರೀಮದುತ್ತರಾಧಿ ಮಠದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 30ನೇ ವರ್ಷದ ಚಾತುರ್ಮಾಸ್ಯ ಮಹೋತ್ಸವ ಹೈದ್ರಾಬಾದ್ (ಭಾಗ್ಯನಗರ)ನ ಶ್ರೀಮದುತ್ತರಾಧಿಮಠದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ. ಚಾತುರ್ಮಾಸದ ಮೊದಲ ದಿನ ಶ್ರೀಗಳ ನೇತೃತ್ವದಲ್ಲಿ ಸoಸ್ಥಾನ ಪೂಜೆ, ಭಕ್ತರಿಗೆ ಮುದ್ರಧಾರಣೆ ಸೇರಿದಂತೆ ವಿವಿಧ ಪೂಜೆಗಳು ಅತ್ಯಂತ ವಿಜೃಂಭಣೆಯಿಂದ ನಡೆದವು. ವಿವಿಧ ಪಂಡಿತರಿಂದ ಉಪನ್ಯಾಸ, ಸಂಜೆ ಶ್ರೀಗಳಿಂದ ಭಕ್ತರಿಗೆ ಆಶ್ರಿವಚನ, ಉಪನ್ಯಾಸ ಸೇರಿದಂತೆ ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆದವು. ಬಳ್ಳಾರಿ ನಗರದ ರೇಡಿಯೋ ಪಾರ್ಕ ಶ್ರೀವ್ಯಾಸರಾಜ ಭಜನಾ ಮಂಡಳಿ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂತ್ರಾಕ್ಷತೆ ಮಹಿಮೆ ಹಾಗೂ ಶ್ರೀ ಪಾಂಡುರಂಗ ಮಹಿಮೆ ನೃತ್ಯರೂಪಕ ಪ್ರಸ್ತುತ ಪಡಿಸಿ ನೆರೆದ ಸಾವಿರಾರು ಭಕ್ತರ ಗಮನಸೆಳೆದರು. ಈ ಕಾಯ೯ಕ್ರಮದಲ್ಲಿ 6 ವರ್ಷದಿಂದ 75 ವರ್ಷದ 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಭಾಗವಹಿಸಿದ ಎಲ್ಲ ಕಲಾವಿದರಿಗೂ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಫಲ ಮಂತ್ರಾಕ್ಷತೆ, ಪ್ರಮಾಣ ಪತ್ರ, ಸಂಭಾವನೆ ನೀಡಿ ಅನುಗ್ರಹಿಸಿದರು. ನೃತ್ಯ ರೂಪಕದ ಕಲ್ಪನೆ , ಸಂಭಾಷಣೆ ಹಾಗೂ ಸಂಯೋಜನೆ ವಿಜಯಲಕ್ಷ್ಮಿ ಸತ್ಯನಾರಾಯಣ ಅವರು ನಿದೇ೯ಶಿಸಿದ್ದರು.