ಕುಕನೂರು : ಸಂಗಪ್ಪಜ್ಜನವರು ದಿಗಂಬರ ಮೂರ್ತಿಯಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಪವಾಡ ನಡೆಸಿದ ಮಹಾನ್ ಪುರುಷರಾಗಿದ್ದರು ಎಂದು ಸಿದ್ದಯ್ಯ ಕಳ್ಳಿಮಠ ಹೇಳಿದರು. ಅವರು ಕುಕನೂರು ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಮಹಾನ್ ಯೋಗಿ ಸಂಗಪ್ಪಜ್ಜನವರ 18ನೇ ವರ್ಷದ ಪುಣ್ಯಾರಾಧನೆಯಲ್ಲಿ ಪಾಲ್ಗೋಂಡು ಮಾತನಾಡಿ ಸಂಗಪ್ಪಜ್ಜನವರು ತಮ್ಮ ಬದುಕಿನುದ್ದಕ್ಕೂ ಹಲವಾರು ಪವಾಡಗಳನ್ನು ಮಾಡುತ್ತಾ ಬಡ ಕುಟುಂಬದ ರೈತರೊಬ್ಬರ ಎತ್ತು ಸತ್ತಾಗ ಮರುಳಿ ಜೀವ ನೀಡಿದ್ದು, ಅವರು ನುಡಿದಂತೆ ಮಳೆ, ಬೆಳೆಗಳು ಆಗಿದ್ದು, ಇನ್ನೂ ಹಲವಾರು ಪವಾಡಗಳನ್ನು ನಾವು ನೋಡಿದ್ದೇವೆ ಅವರೊಬ್ಬ ದೈವಿ ಶಕ್ತಿ ಪುರುಷರಾಗಿದ್ದರು ಎಂದು ಹೇಳಿದರು.
ಇವರಿಗೆ ನಿಡಗುಂದಿ, ರೋಣ, ಜಕ್ಕಲಿ, ಕಂದಕೂರ, ನೆರೆಗಲ್, ತುರ್ವಿಹಾಳ, ಸಂಕನೂರು, ಹಾಲಕೆರೆ, ಕರಬರಕಟ್ಟಿ, ಹಿರೇಗೊಣ್ಣಾಗರ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ ಭಕ್ತ ಸಮೂಹ ಹೊಂದಿದ್ದಾರೆ.
ಇವರು ಪಟ್ಟಣದ ಕೂಡ್ಲೂರ್ ಮನೆತನದವರಾಗಿದ್ದು ಈ ದೇವಸ್ಥಾನದ ಎಲ್ಲಾ ವ್ಯವಸ್ಥೆಗಳನ್ನು ಮಲ್ಲಿಕಾರ್ಜುನ ಕೂಡ್ಲೂರ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಇವರು ಕಾಲಾ ನಂತರ ತುರ್ವಿಹಾಳನ ಇವರ ಪರಮ ಭಕ್ತರಾದ ಭಜಪ್ಪ ಕುಂಟೋಜಿಯವರು ಇವರ ದೇವಸ್ಥಾನ ನಿರ್ಮಿಸಿದ್ದಾರೆ. ಪ್ರತಿ ಅಮವಾಸ್ಯೆ ಹಾಗೂ ಪ್ರತಿ ವರ್ಷ ಪುಣ್ಯಾರಾಧನೆಯಂದು ಇವರು ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುತ್ತಾರೆ. ಇವರ ದೇವಸ್ಥಾನ ನಿರ್ಮಾಣಕ್ಕೆ ಬಸವರಾಜ ಕರಿಗಾರ ಭೂಮಿ ದಾನ ಮಾಡಿದ್ದಾರೆ ಎಂದು ಹೇಳಿದರು.
ನಂತರದಲ್ಲಿ ರೋಣ ತಾಲೂಕಿನ ಗುಳಗುಳಿ ದೇವಿಮಠದ ಲಿಂಗಾನಂದ ಸ್ವಾಮಿಗಳು, ಕುಕನೂರು ರಾಘವಾನಂದ ಆಶ್ರಮದ ಆತ್ಮಾನಂದ ಸ್ವಾಮಿಗಳು ಆಶಿರ್ವಚನ ನೀಡಿದರು.
ಸಂಗಪ್ಪಜ್ಜನವರ ಜೀವನ ಚರಿತ್ರೆಯ ಪುಸ್ತಕವನ್ನು ಯಲಬುರ್ಗಾ ತಾಲೂಕಿನ ಸೊಂಪೂರ ಹೊಸೂರು ಗ್ರಾಮದ ಹನುಮಂತಪ್ಪ ಬೊರಗಿ ಅವರು ಬರೆಯುತ್ತಿದ್ದು ಇದರ ಮುದ್ರಣ ಸೇವೆಯನ್ನು ಸಂಗಪ್ಪಜ್ಜನವರ ಸಹೋದರಿ ರತ್ನಮ್ಮನವರು ಮುದ್ರಿಸಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಸಲಿಂಗಪ್ಪ ಕಂದಕೂರ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ಕೂಡ್ಲೂರ, ದ್ಯಾಮಣ್ಣ ಹಿರೇಗೊಣ್ಣಾಗರ, ಶರಣಪ್ಪ ಮುಧೋಳ, ಶರಣಪ್ಪ ಕೂಡ್ಲೂರ, ಗುಡದಪ್ಪ ಕಿನ್ನಾಳ, ಈರಣ್ಣ ಯರಗಲ್, ಓಂಕಾರಯ್ಯ ಕಂದಕೂರ, ಹನುಮಂತಪ್ಪ ಹೂಗಾರ, ಮಹಾದೇವಪ್ಪ ಕುಂಬಾರ, ಸುಕಮುನಿ ಸೇರಿದಂತೆ, ಸಂಗಪ್ಪಜ್ಜನವರ ಮನೆತನದವರು, ವಿವಿಧ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.