ದಿ.೧೫ ರಿಂದ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವ

Sandeep Malannavar
ದಿ.೧೫ ರಿಂದ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವ
WhatsApp Group Join Now
Telegram Group Join Now

ಕುಳಲಿಯಲ್ಲಿ ಸಂಗೀತ ಮಹೋತ್ಸವ, ಇಂದು ಹಿರಿಯರ ಪೂರ್ವಭಾವಿ ಸಭೆ

ಮುಧೋಳ:ಜ.೦೯.,ತಾಲೂಕಿನ ಕುಳಲಿಗ್ರಾಮದಲ್ಲಿ ಸಂಗೀತ ಮಹೋತ್ಸವದ ಹಿರಿಯರ ಪೂರ್ವಭಾವಿ ಸಭೆಯು ಇಂದು ಜ,೧೦ ರಂದು ಶಂಕರಾನಂದ ಶ್ರೀಗಳು ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದಲ್ಲಿ ಸಭೆಯನ್ನು ಕರೆದಿದ್ದು, ದಿ.೧೫ ರಿಂದ ೨೪ರ ವರೆಗೆ ಒಟ್ಟು ೧೦ ದಿನಗಳ ಕಾಲ ೨೦ನೇ ಅಖಿಲ ಭಾರತ ವೇದಾಂತ ಪರಿಷತ್ ಹಾಗೂ ರಾಜ್ಯ ಮಟ್ಟದ ಜನಪದ ಸಂಗೀತೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು ಹೇಳಿದರು.

ಅವರು ಪತ್ರಿಕೆ ಯೊಂದಿಗೆ ಮಾತನಾಡುತ್ತ ಅದ್ವೈತಸಾರ್ವಭೌಮ ಜಗದ್ಗುರು ಶ್ರೀ ಸಿದ್ಧಾರೂಢರ ಪುರಾಣ.ಸಾಧು ಚಕ್ರವರ್ತಿ ಜಗದ್ಗುರು ಶ್ರೀ ಶಿವಾನಂದ ಭಾರತಿ ಶ್ರೀಗಳ ಬೆಳ್ಳಿ ರಥದಲ್ಲಿ ಉತ್ಸವ.೮೬ ನೇ ಜಯಂತ್ಯೋತ್ಸವ.ತುಲಾಭಾರ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದ ಅವರು೧೦ ದಿನಗಳ ಕಾಲ ನಡೆಯುವ ಈ ವೇದಿಕೆಯಲ್ಲಿ ಸಾಧಕರಿಗೆ ಗೌರವ.ನಾಡಿನ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ರಸದೌತಣ ಹಾಗೂ ಬಂದ ಭಕ್ತಸ್ತೋಮಕ್ಕೆ ನಿರಂತರ ಪ್ರಸಾದ.ವಿಶೀಷ ರೀತಿಯಲ್ಲಿ ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ತನ್ನಿಮಿತ್ಯ ಸ್ಥಳೀಯ ಹಿರಿಯರ, ಕಲಾವಿದರ, ಕಾಯ೯ಕತ೯ರ, ಸಭೆಯನ್ನು ಶನಿವಾರ ದಿ.೧೦ ರಂದು ಮುಂಜಾನೆ ೧೦ ಗಂಟೆಗೆ ಕರೆಯಲಾಗಿದೆ. ಎಲ್ಲರೂ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆ, ಸಹಕಾರ ಮಾಗ೯ದಶ೯ನ ನೀಡಲು ಶಂಕರಾನಂದ ಶ್ರೀಗಳು ಕೋರಿದ್ದಾರೆ.

ಈ ಸಂದರ್ಭದಲ್ಲಿ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು.ಹಿರಿಯರಾದ ಸಂಗಪ್ಪ ಗಣಿ.ಶಿವಪ್ಪ ಪವಾಡ ಶೆಟ್ಟಿ.ರಮೇಶ ತಳಪಟ್ಟಿ.ಗಂಗಪ್ಪ ಲಕ್ಕಪ್ಪಗೋಳು. ಕಾಯ೯ಕತ೯ರಾದ ರಮೇಶ ಸೋಲೋಣಿ.ಮುತ್ತಪ್ಪ ಪೋಳ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article