ಹುಕ್ಕೇರಿ : ತಾಲೂಕಿನ ಯಮಕನಮರಡಿಯಲ್ಲಿ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹುಕ್ಕೇರಿ ಸಹಯೋಗದಲ್ಲಿ ರವಿವಾರ ದಿ. 23-02-2025 ಮುಂಜಾನೆ 8 ರಂದ ಸಾಯಂಕಾಲ 5ರ ವರೆಗೆ ಯಮಕನಮರಡಿಯ ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಹುಣಸಿಕೊಳ್ಳಮಠದಲ್ಲಿ ನೇರವೆರಲಿದೆ. ಸಮ್ಮೇಳನದ ಸವಾ೯ಧ್ಯಕ್ಷರಾಗಿ ಹುಕ್ಕೇರಿ ಹಿರೇಮಠದ ಶ್ರೀ ಷ. ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಉಪಾಧ್ಯಕ್ಷರಾಗಿ ಪ್ರಕಾಶ ಬಾ ಅವಲಕ್ಕಿ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಿರಣಸಿಂಗ್ ರಜಪೂತ, ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿ ವೀರಣ್ಣಾ ಬಿಸಿರೋಟ್ಟಿ, ಕಾರ್ಯದರ್ಶಿಗಳಾಗಿ ರವಿಂದ್ರ ಜಿಂಡ್ರಾಳಿ ಭಾಗವಹಿಸಲಿದ್ದಾರೆ.
ಕಾಯ೯ಕ್ರಮಗಳು ರಾಷ್ಟ್ರ ಧ್ವಜಾರೋಹಣ ಮುಂಜಾನೆ 8 ಘಂಟೆಗೆ ಪರಿಷತ್ತಿನ ಧ್ವಜಾರೋಹಣವನ್ನು ಬಸವರಾಜ ಕುಂಬಾರ ನೆರವೇರಿಸುವರು, ನಾಡು ಧ್ವಜಾರೋಹಣವನ್ನು ಬೆಳಗಾವಿ ಕ ಸಾ ಪ ಅಧ್ಯಕ್ಷ ಶ್ರೀಮತಿ ಮಂಗಲಾ ಮೆಟಗುಡ್ಡ, ಪ್ರಕಾಶ ಬ ಅವಲಕ್ಕಿ ತಾಲೂಕಾ ಅಧ್ಯಕ್ಷರು ಕ ಸಾ ಪ ಹುಕ್ಕೇರಿ ಇವರು ನೆರವೇರಿಸಲಿದ್ದಾರೆ.
8-20 ಕ್ಕ ಕನ್ನಡ ನಾಡದೇವಿಯ ಮತ್ತು ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಲ್ಲಾ ಮತ್ತು ತಾಲೂಕಾ ಕಾ ಸಾ ಪ ಸದಸ್ಯರು ಪಾಲ್ಗೊಳ್ಳುತ್ತಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.