ಮೇಕಲಮರಡಿ ಗ್ರಾಮದಲ್ಲಿ ದಿ.10 ರಿಂದ ವಾರದ ಸಂತೆ ಪ್ರಾರಂಭ

Ravi Talawar
ಮೇಕಲಮರಡಿ ಗ್ರಾಮದಲ್ಲಿ ದಿ.10 ರಿಂದ ವಾರದ ಸಂತೆ ಪ್ರಾರಂಭ
WhatsApp Group Join Now
Telegram Group Join Now
ನೇಸರಗಿ:  ಸಮೀಪದ  ಮೇಕಲಮರಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಸಲುವಾಗಿ ಬೇರೆ ಗ್ರಾಮಗಳಿಗೆ ಹೋಗಿ ಸಂತೆಯನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇದ್ದ ಕಾರಣ ಹಲವು ದಿನಗಳಿಂದ ಸಾರ್ವಜನಿಕರಿಂದ ಬೇಡಿಕೆ ಇತ್ತು, ಆದ್ದರಿಂದ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಈ ಸಂತೆ ವಿಷಯವಾಗಿ  ತೀರ್ಮಾನ ಮಾಡಿ  ದಿನಾಂಕ 10.09.2025 ರಂದು ಮೇಕಲಮರಡಿ ಗ್ರಾಮದಲ್ಲಿ ಸಂತೆ ಮಾಡಲು ಗ್ರಾಮ ಪಂಚಾಯತ  ತೀರ್ಮಾನಿಸಿದ್ದು ಆದ್ದರಿಂದ ದಿನಾಂಕ 10.09.2025  ರಿಂದ ಪ್ರತಿ  ಬುಧವಾರದಂದು ಶ್ರೀ ಬಸವೇಶ್ವರ ಗುಡಿ ಓಣಿಯಲ್ಲಿ ಪ್ರಾರಂಭ ಮಾಡಲು ತೀರ್ಮಾನ ಮಾಡಿದ್ದು, ಆದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ಸದರಿ ಸಂತೆಗೆ ಬಂದು ತಮ್ಮ ವ್ಯಾಪಾರ, ವಹಿವಾಟು ಮಾಡಿ  ಸಹಕಾರ ನೀಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article