ಪಠ್ಯ ಪುಸ್ತಕದ  ದರ ಶೇ 10 ರಷ್ಟು ಏರಿಕೆ; ಪೋಷಕರು ಶಾಕ್‌

Ravi Talawar
ಪಠ್ಯ ಪುಸ್ತಕದ  ದರ ಶೇ 10 ರಷ್ಟು ಏರಿಕೆ; ಪೋಷಕರು ಶಾಕ್‌
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 22: ಹಾಲು, ನೀರು, ಕರೆಂಟ್, ಬಸ್ ದರ ಸೇರಿದಂತೆ ಪ್ರತಿನಿತ್ಯ ಬಳಸುವಂತಹ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ನೂರಾರು ಕನಸುಗಳನ್ನು ಹೊತ್ತು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕು ಎಂದು ಪೋಷಕರು ಖಾಸಗಿ ಶಾಲೆಗಳಿಗೆ  ಮಕ್ಕಳ ದಾಖಲಾತಿ ಮಾಡಿಸುತ್ತಾರೆ. ಆದರೆ ಶಾಲಾ ಶುಲ್ಕವು ಏರಿಕೆಯಾಗಿದ್ದು, ಫೀಸ್ ಕಟ್ಟಲು ಪೋಷಕರು ಒದ್ದಾಡುತ್ತಿರುವ ಸಂದರ್ಭದಲ್ಲಿ ಇದೀಗ ಪಠ್ಯ ಪುಸ್ತಕದ  ದರ ಶೇ 10 ರಷ್ಟು ಏರಿಕೆಯಾಗಿದೆ ಎಂಬುದು ತಿಳಿದುಬಂದಿದೆ. ಖಾಸಗಿ ಶಾಲೆಗಳ ಒಕ್ಕೂಟ ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

ಪಠ್ಯ ಪುಸ್ತಕಕ್ಕೆ ಹೆಚ್ಚು ದರ ಕೇಳುತ್ತಿರುವ ಪಠ್ಯ ಪುಸ್ತಕ ಸಂಘ: ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಪಠ್ಯ ಪುಸ್ತಕ ಸಂಘ, ಮುಂಗಡ ಶೇ 10ರಷ್ಟು ಹಣವನ್ನು ಆನ್ ಲೈನ್ ಮೂಲಕ ಪಾವತಿಸಿಕೊಂಡಿತ್ತು. ಈಗ ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ 10 ರಷ್ಟು ಹೆಚ್ಚು ಕೇಳುತ್ತಿದೆ. ಇದರ ನೇರ ಪರಿಣಾಮ ಪೋಷಕರಿಗೆ ತಟ್ಟಲಿದೆ. ಖಾಸಗಿ ಶಾಲೆಗಳು ಈ ಬೆಲೆ ಏರಿಕೆಯ ಹೊರೆಯನ್ನು ಪೋಷಕರ ಮೇಲೆ ಹಾಕಲು ಮುಂದಾಗಿವೆ.

WhatsApp Group Join Now
Telegram Group Join Now
Share This Article