ಹುನಗುಂದ; ಹೊಸ ವರ್ಷದ ಪಾದಾರ್ಪಣೆ ಹಿನ್ನೆಲೆ ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತ ಸ್ವಚ್ಚತೆ ಹಾಗೂ ಸುರಕ್ಷತೆ ಕಾಯ್ದುಕೊಳ್ಳುವುದರ ಬಗ್ಗೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ನೇತೃತ್ವದ ಆಹಾರ ಇಲಾಖೆಯ ಅಧಿಕಾರಿಗಳ ತಂಡ ನಗರದ ಹೊಟೆಲ್, ದಾಭಾ ಮತ್ತು ಬೇಕರಿಗಳಿಗೆ ದಿಢೀರ ಬೇಟಿ ನೀಡಿ ಸ್ವಚ್ಚತೆ ಮತ್ತು ಗುಣಮಟ್ಟದ ಆಹಾರ ತಯಾರಿಕೆಯನ್ನು ಪರಿಶೀಲಿಸಿ ಗುಣಮಟ್ಟದ ಆಹಾರ ತಯಾರಿಸಿ ಸ್ಚ್ಚತೆಗೆ ಆಧ್ಯತೆ ನೀಡಬೇಕೆಂದು ಸೂಚನೆ ನೀಡಿದರು.
೨೦೨೬ ಹೊಸ ವ? ಆಗಮನಕ್ಕೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನರು ಹೊಸ ವರ್ಷ ಸಂಭ್ರಮಕ್ಕೆ ತುದಿಗಾಲ ಮೇಲೆ ನಿಂತ ಯುವಕ ಯುವತಿಯರು ವರ್ಷದ ಸಂತಸ ಹಂಚಿಕೊಳ್ಳು ವಿವಿದ ಬೇಕರಿಗಳಿಂದ ಕೇಕ್, ಮತ್ತು ಹೊಟೆಲ್‌ಗಳಲ್ಲಿ ಪಾರ್ಟಿ ಮಾಡಲು ಮುಂದಾದ ಹಿನ್ನೆಲೆ ಎಲ್ಲಿಯು ಕೂಡಾ ಆಹಾರ ಕಲಬೆರಕೆಯಾಗಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಅಂಡಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಸಗಥಳೀಯ ಒಂದು ಬೇಕರಿಯಲ್ಲಿ ಅಸ್ವಚ್ಚತ ಎದ್ದು ಕಂಡ ಕುರಿತು ಗೃಹ ಬಳಕೆ ಸಿಲೆಂಡರ ಬಳಸುತ್ತಿರುವ ಕುರಿತು ಕಂಡ ಹಿನ್ನೆಲೆ ವಿಷಯವನ್ನು ಬಾಗಲಕೋಟ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಾಯಿತೆಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ತಿಳಿಸಿದರು. ಬೇಕರಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ವ್ಯವಸ್ಥೆ ತಡೆಯುವಂತೆ ಅಂಗಡಿ ಮಾಲೊಕನಿಗೆ ತಹಶೀಲ್ದಾರ ದಂಢ ವಿಧಿಸಿದರು.
ಈ ವೇಳೆ ಹುನಗುಂದ ತಾಲೂಕ ಅಹಾರ ನಿರೀಕ್ಷಕ ರಾಜಶೇಖರ ತುಂಬಗಿ, ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಸಂದೀಪ ತಿಡಗುಂದಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಟೆಲ್, ದಾಭಾ ಮತ್ತು ಬೇಕರಿಗಳಿಗೆ ದಿಢೀರ ಬೇಟಿ : ಸ್ವಚ್ಚತೆ ಮತ್ತು ಗುಣಮಟ್ಟ ಪರಿಶೀಲಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ


