ಬೆಳಗಾವಿ : ಮಂಗಳವಾರ ಬೆಳಿಗ್ಗೆ ಬೆಳಗಾವಿಯ ತಹಶೀಲ್ದಾರ ಕಚೇರಿಯಲ್ಲಿ ಕಛೇರಿಯ ದ್ವಿತೀಯ ದರ್ಜೆಯ ಸಹಾಯಕರಾದ ರುದ್ರನ್ನ ಯಡವನ್ನವರ ನೇಣಿಗೆ ಶರಣಾದ ಘಟನೆ ಕಂಡುಬಂದಿದೆ.
ನಿನ್ನೆಯಷ್ಟೇ ಸವದತ್ತಿಗೆ ವರ್ಗಾವಣೆ ಆಗಿರುವ ಮಾಹಿತಿ ಇದ್ದು, ಅದರ ಕುರಿತಾದ ಅಸಮಾಧಾನವೂ ಸಾವಿಗೆ ಶರಣಾದ ವ್ಯಕ್ತಿಗೆ ಇದ್ದಿತು ಎಂಬ ಮಾಹಿತಿ ಲಭ್ಯವಾಗಿದ್ದು, ನೇಣಿಗೆ ಶರಣಾದ ವ್ಯಕ್ತಿಯ ಪತ್ನಿ ಗಿರಿಜಾ ಕೂಡಾ ತಹಶೀಲ್ದಾರ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಹಿರಿಯ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಬೆಳಗಾವಿ ಡಿ ಸಿ ಪಿ ರೋಹನ ಜಗದೀಶ್ ಮತ್ತು ಖಡೆ ಬಜಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.