ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗೆ ತಾಂತ್ರಿಕ ಮಾಹಿತಿ; ರಸ್ತೆ ಅಪಘಾತ ತಡೆಗೆ ಹೊಸ ಕ್ರಮ

MK HasiruKranti
ಜಿಲ್ಲೆಯ ಎಲ್ಲಾ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗೆ ತಾಂತ್ರಿಕ ಮಾಹಿತಿ; ರಸ್ತೆ ಅಪಘಾತ ತಡೆಗೆ ಹೊಸ ಕ್ರಮ
WhatsApp Group Join Now
Telegram Group Join Now
ವಿಜಯನಗರ :
ಹೊಸಪೇಟೆಯಲ್ಲಿ ಬುದುವಾರ ರಸ್ತೆ ಸುರಕ್ಷತೆ ಬಲಪಡಿಸುವುದು ಹಾಗೂ ಅತಿವೇಗ ಚಾಲನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ವಿಜಯನಗರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ಪೀಡ್ ರಾಡಾರ್ ಗನ್ ಬಳಕೆ ಕುರಿತು ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ತರಬೇತಿ ವೇಳೆ ಸ್ಪೀಡ್ ರಾಡಾರ್ ಗನ್‌ನ ತಾಂತ್ರಿಕ ಬಳಕೆ ವಾಹನಗಳ ವೇಗ ಮಾಪನ ವಿಧಾನ ಅತಿವೇಗದಲ್ಲಿ ಸಂಚರಿಸುವ ವಾಹನಗಳನ್ನು ಗುರುತಿಸುವ ಕ್ರಮ, ಕಾನೂನುಬದ್ಧ ದಾಖಲೆ ನಿರ್ವಹಣೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು
ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ವಿಶೇಷವಾಗಿ ಅತಿವೇಗ ಚಾಲನೆ ವಿರುದ್ಧ ಕಠಿಣ ನಿಗಾ ವಹಿಸುವ ನಿಟ್ಟಿನಲ್ಲಿ ಈ ತರಬೇತಿ ಮಹತ್ವದ್ದಾಗಿದೆ ಎಂದು ತಿಳಿಸಲಾಯಿತು ಮುಂದಿನ ದಿನಗಳಲ್ಲಿ ಪ್ರಮುಖ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ಹಾಗೂ ನಗರ ಪ್ರದೇಶಗಳಲ್ಲಿ ಈ ಉಪಕರಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡುವ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶವಿದೆ ಎಂದು ಪೊಲೀಸ್ ‌ಎಸ್.ಪಿ.ಜಾಹ್ನ್ ವಿ   ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಉಪಸ್ಥಿತರಿದ್ದು, ತರಬೇತಿಯ ಮಹತ್ವವನ್ನು ವಿವರಿಸಿ, ಸಾರ್ವಜನಿಕರ ಜೀವ ರಕ್ಷಣೆ ಹಾಗೂ ಅಪಘಾತಗಳ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ತಾಂತ್ರಿಕ ಸಾಧನಗಳ ಸಮರ್ಪಕ ಬಳಕೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
WhatsApp Group Join Now
Telegram Group Join Now
Share This Article