ವಿಜಯಪುರ – ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕ್ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಜಯಪುರ ಇವರ ಸಹಯೋಗದೊಂದಿಗೆ ಮಾನ್ಯ ನೂತನ ಜಿಲ್ಲಾಧಿಕಾರಿಗಳಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಾನಂದ ಹಿರೇಕುರಬರ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಬಿರಾದಾರ್ ತಾಲೂಕಾಧ್ಯಕ್ಷರಾದ ಆನಂದ್ ಕುಲಕರ್ಣಿ. ಮಹಾಮಂಡಲದ ವಿಜಯಪುರ ನಗರ ವಲಯದ ಅದ್ಯಕ್ಷರಾದ ಎಚ್ ಜಿ ತೋನಶ್ಯಾಳ ಪ್ರಧಾನ ಕಾರ್ಯದರ್ಶಿಯಾದ ಬಿ ಎನ್ ಕಾಳಿ. ಉಪಾಧ್ಯಕ್ಷರಾದ ಮಾಂತೇಶ್ ಜತ್ತಿ. ಖಜಾಂಚಿಗಳಾದ ಸಂಜು ಪುಲಾರಿ. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ. ವಿಜಯಕುಮಾರ ವಪ್ಪಾರಿ. ಹಾಗೂ ಗಿರೀಶ್ ಕುಲಕರ್ಣಿ ಜಿಲ್ಲಾ ಉಪಾಧ್ಯಕ್ಷರಾದ ಸುರೇಶಗೌಡ ಬಿರಾದಾರ ಜಿಲ್ಲಾ ಖಜಾಂಚಿ ಎಸ್ ಎಸ್ ಗಣಿ ಜಿಲ್ಲಾ ಸಹ ಕಾರ್ಯದರ್ಶಿ ಎಚ್ ಎ ಕುಂದರಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಶಿಕ್ಷಕರ ಅನೇಕ ಸಮಸ್ಯೆಗಳನ್ನು ಚರ್ಚಿಸಲಾಯಿತು. ಜಿಲ್ಲಾಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿದರು.
ಶಿವಾನಂದ ಹಿರೇಕುರುಬರ