ಬೆಳಗಾವಿ: ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಈ ಮಹಿಳಾ ಸಂಘನೆ ಕಾರ್ಯ ಶ್ಲಾಘನೀಯ ಎಂದು ನಿವೃತ್ತಿ ಯೋಧರು, ಶಿಕ್ಷಕ ಅರ್ಜುನ್ ಬೈಲೂರು ಅವರು ಹೇಳಿದರು.
ನಗರದ ಹಿಂದವಾಡಿಯ ಉಮೇಶ್ ದೇಶ್ನೂರ್ ಅವರ ನಿವಾಸದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಶಿಕ್ಷಕರ ದಿನಾಚರಣೆಯ ಆಚರಿಸಲಾಯಿತು, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಂಘಟನೆ ನಿರ್ಮಿಸುವುದು ಮುಖ್ಯವಲ್ಲ, ಅದನ್ನು ಯೋಗ್ಯವಾದ ರೀತಿಯಲ್ಲಿ ನಡೆಸಿಕೊಂಡು ಸಮಾಜದ ಹಿತಕ್ಕಾಗಿ ಕೆಲಸ ಮಾಡುವುದು ಮುಖ್ಯ. ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನವು ಸಮಾಜಮುಖಿ ಕಾರ್ಯಗಳನ್ನು ತಿಳಿದು ಇದರಿಂದ ನಮಗೂ ಸ್ಪೂರ್ತಿ ದೊರೆತಿದೆ ಎಂದು ಹೇಳಿದರು.
ಡಾ, ರಾಧಾಕೃಷ್ಣನ್ ಅವರು ಶಿಕ್ಷಕರು, ವಿದ್ವಾಂಸರು ಮತ್ತು ತತ್ವಜ್ಞಾನಿಗಳಾಗಿ ಅವರ ಅದ್ಭುತ ಕೌಶಲ್ಯಯುತ ವ್ಯಕ್ತಿಯಾಗಿ ಹೆಸರು ಪಡೆದವರು. ತಮ್ಮ ಜೀವನದುದ್ದಕ್ಕೂ, ಅವರು ಇತರರಿಗೆ ಓದಿನ ಕುರಿತು ಆಸಕ್ತಿ ಬೆಳೆಸಿ, ವಿದ್ಯಾಭ್ಯಾಸ ಆರಂಭಮಾಡುವಂತೆ ಪ್ರೇರೇಪಿಸಿದರು. ಅಷ್ಟೇ ಅಲ್ಲದೇ, ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣದ ಶಕ್ತಿಯ ಎಷ್ಟು ಎಂಬುದನ್ನು ಒತ್ತಿ ಹೇಳಿದರು. ತಮ್ಮ ಜೀವನಾದ್ಯಾಂತ ಜನರಿಗೆ ಸಾಕ್ಷರತೆ ಅರಿವನ್ನು ಹರಡಲು ಪ್ರಯತ್ನಿಸಿದ ಅವರ ಜನ್ಮ ದಿನವನ್ನು ಶಿಕ್ಷಣ ದಿನವಾಗಿ ದೇಶದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವನಿತಾ ಹಾಲಪ್ಪನವರ್ ಅವರು ಮಾತನಾಡಿ, ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನವು ಸಾಮಾಜಿಕ ಕಾರ್ಯಗಳನ್ನುಸತೀವ ಸಂತೋಷವಾಗಿದೆ. ಎಲ್ಲ ಮಹಿಳೆಯರು ಒಗ್ಗೂಡಿಕೊಂಡು ಸಮಾಜ ಸೇವೆಗಾಗಿ ಶ್ರಮಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ. ನಿಮ್ಮಂತ ಸಂಸ್ಥೆಯಿಂದ ನನಗೆ ಸನ್ಮಾನ ಮಾಡಿಕೊಳ್ಳುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.
ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವನಿತಾ ಹಾಲಪ್ಪನವರ ಹಾಗೂ ಮತ್ತು ನಿವೃತ್ತಿ ಯೋಧರು, ಶಿಕ್ಷಕ ಅರ್ಜುನ್ ಬೈಲೂರು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಂಗಲ್ ಮಠದವರು ಸ್ವಾಗತಿಸಿದರು, ಕಾರ್ಯದರ್ಶಿ ಭರತಿ ರತ್ನಪ್ಗೊಳ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಗೀತಾ ಅಕ್ಷತಾ ಅನಿತಾ ಸುಂದರವಾಗಿ ಪ್ರಾರ್ಥಿಸಿದರು. ಮಮತಾ ಆಂಟಿನ, ರೇಣುಕಾ ಕಾಂಬ್ಳೆ ಅತಿಥಿಗಳ ಪರಿಚಯ ಮಾಡಿದರು, ಆಶಾ ನಿಲಜಗಿ, ತ್ರಿಶಲಾ ಪಾಯಪನವರ್ ,ಮಂಡಲದ ಎಲ್ಲ ಸದಸ್ಯರು ಹರ್ಷಾಶ್ರಮದ ಮುದ್ದು ಮಕ್ಕಳು ರಾಜೇಂದ್ರ ಮಠದ ಮತ್ತು ಗುಡಗ್ನಟ್ಟಿ ಇತರರು ಇದ್ದರು. ರತ್ನಶ್ರೀ ಗುಡೆರ್ ನಿರೂಪಿಸಿದರು. ಶೋಭಾ ಕಾಡನ್ನವರ್ ವಂದಿಸಿದರು.


