ಇಂಡಿ: ಬೆಂಗಳೂರಿನ ಶಿಕ್ಷಣ ಜ್ಞಾನ ಮಾಸಪತ್ರಿಕೆಯ 22ನೇ ವಾರ್ಷಿಕೋತ್ಸವದ ನಿಮಿತ್ತ 2024-25 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರಿಗೆ ಕೊಡಮಾಡುವ ‘ರಾಜ್ಯ ಮಟ್ಟದ ಬಹುಮುಖ ಶಿಕ್ಷಕ ಪ್ರತಿಭೆ ರತ್ನ’ ಪ್ರಶಸ್ತಿಗೆ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ಸಂಪಾದಕ ಎಸ್ ವ್ಹಿ ನಾಗರಾಜ್ ತಿಳಿಸಿದ್ದಾರೆ.
ಶಿಕ್ಷಕ ಸಂತೋಷ ಬಂಡೆ ಅವರ ಶೈಕ್ಷಣಿಕ, ಸಾಹಿತ್ಯಿಕ,
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಅನೇಕ ವಿಭಾಗಗಳಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಸೇರಿದಂತೆ ಅನೇಕ ಗಣ್ಯರು ಬೀಳಗಿಯಲ್ಲಿ ಜರುಗುವ ‘ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ’ದಲ್ಲಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಗೌರವ ಸಂಪಾದಕ ಡಾ. ಎಚ್ ರಾಮಚಂದ್ರಪ್ಪ ತಿಳಿಸಿದ್ದಾರೆ.