ರನ್ನ ಬೆಳಗಲಿ: (ಡಿ.13),ತಾಲೂಕಿನ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯ ಅಧಿಕಾರಿಗಳ ಕಾರ್ಯಾಲಯ,ಶಾಲಾ ಶಿಕ್ಷಣ ಇಲಾಖೆ, ಮುಧೋಳ. ಹಾಗೂ ಆರ್ ಎಮ್ ಜಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿ,ಸ್ಥಳದಲ್ಲಿ ಮಾದರಿ,ಕಲಿಕೋಪಕರಣಗಳ ತಯಾರಿಕಾ ಸ್ಪರ್ಧೆಯನ್ನು ತಾಲೂಕಿನ ಎಲ್ಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದು,ಈ ಸ್ಪರ್ಧೆಯಲ್ಲಿ ಪಟ್ಟಣದ ನಿವಾಸಿಯಾದ ಸದಾಶಿವ ಹನುಮಂತ ಫುರಾಣಿಕ ಗಣಿತ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಅಕ್ಕಿಮರಡಿ ಅವರು ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಿರಂತರ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಬಂದಿರುವ ಸಂಪನ್ಮೂಲ ಗಣಿತ ಶಿಕ್ಷಕರ ಪ್ರಯತ್ನಕ್ಕೆ ಸರ್ಕಾರಿ ಪ್ರೌಢಶಾಲೆ ಅಕ್ಕಿಮರಡಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಎಸ್ ಡಿ ಎಮ್ ಸಿ ಪದಾಧಿಕಾರಿಗಳು, ತಾಲೂಕಾ ಗಣಿತ ವಿಷಯ ಸಮೂಹ,ರನ್ನ ಬೆಳಗಲಿಯ ಶ್ರೀ ಶಾರದಾ ಮಾತಾ ಶಿಕ್ಷಣ ಮತ್ತು ಯೋಗಾಶ್ರಾಮ ಟ್ರಸ್ಟ್ ವತಿಯಿಂದ ಸಾಧನೆ ಗೈದ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದ್ದಾರೆ.
ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗೆ ಶಿಕ್ಷಕ ಸದಾಶಿವ ಪುರಾಣಿಕ ಆಯ್ಕೆ


