ಬೆಳಗಾವಿ : ನಗರದಲ್ಲಿ ಬುಧವಾರ ದಿ. ೧೯ ರಂದು ಈಫಾ ಹೋಟೆಲ್‌ನಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ನೀತಿ ಆಯೋಗ ಮತ್ತು ಶೆಲ್ ಇಂಡಿಯಾ ಸಹಯೋಗದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಗಾರದ ರಿಫ್ರೆಶರ್ -೫ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹಾರೂಗೇರಿಯ ಸೆಂಟ್ ಪೀಟರ್ಸ್ ಪ್ರಾಂಶುಪಾಲರಾದ ಶ್ರೀಮತಿ ಗುಲ್ತಾಜ್‌ಖಾನ್ ಇವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿ ಮುಂದಿನ ಪೀಳಿಗೆಯ ನಾಯಕರನ್ನು ಪ್ರೇರೇಪಿಸಲು ಸೆಲ್ ನೆಕ್ಷಪ್ಲೋರರ್‍ಸ್ ಶಿಕ್ಷಕರನ್ನು ಸಜ್ಜುಗೊಳಿಸುತ್ತಿದೆ, ಈ ಒಂದು ಶೈಕ್ಷಣಿಕ ಕಾರ್ಯಕ್ರಮ ಶಿಕ್ಷಕರನ್ನು ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯಗತಗೊಳಿಸುತ್ತಿರುವ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ತರಬೇತಿಯಲ್ಲಿ ಅಳವಡಿಸಿಕೊಳ್ಳಲಾದ ನವೀನ ಚಟುವಟಿಕೆಗಳು, ಉಪಕರಣಗಳು ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್‌ನ ಕಾರ್ಯವೈಖರಿಯನ್ನು ಹೊಗಳಿದರು. ಯುವ ಮನಸ್ಸುಗಳನ್ನು ಪೋಷಿಸುವ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ೧೬ ಶಾಲೆಗಳಿಂದ ೨೪ ಎ.ಟಿ.ಎಲ್ ಶಿಕ್ಷಕರು ಹಾಗೂ ೩ ಪ್ರಾಂಶುಪಾಲರು ಉತ್ಸಾಹದಿಂದ ಹಾಜರಾಗಿ ತರಬೇತಿಯ ಸಂಪೂರ್ಣ ಲಾಭವನ್ನು ಪಡೆದರು ಎಂದು ಹೇಳಿದರು.


