ಶ್ರಮಿಕರು ಕೂಲಿ ಕಾರ್ಮಿಕರ ಸೇವೆಗೆ ಸದಾ ಸಿದ್ಧ – ತೌಫಿಕ್‌ ಪಾರ್ಥನಳ್ಳಿ

Pratibha Boi
WhatsApp Group Join Now
Telegram Group Join Now
 ಜಮಖಂಡಿ; ಶ್ರಮಿಕರು, ಕೂಲಿಕಾರ್ಮಿಕರ ಸೇವೆಗೆ ಸದಾಸಿದ್ಧವಿರುವದಾಗಿ ಉದ್ಯಮಿ ತೌಫಿಕ್‌ ಪಾರ್ಥನಳ್ಳಿ ಹೇಳಿದರು, ನಗರದ ನಿರೀಕ್ಷಣಾ ಮಂದಿರ ರಮಾನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡರ ಅಪೇಕ್ಷೆಯಂತೆ ಭಾರತ ರಾಷ್ಟ್ರೀಯ ಟ್ರೇಡ್‌ ಯುನಿಯನ್‌ ಕಾಂಗ್ರೆಸ್‌ನ (ಐಎನ್‌ಟಿಯುಸಿ) ಬಾಗಲಕೋಟೆ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯ ಅಧ್ಯಕ್ಷ ಡಾ.ಟಿ.ವೈ.ಕುಮಾರ ಅವರು ತಮ್ಮನ್ನು ನಿಯಮಿಸಿ ಆದೇಶ ಮಾಡಿದ್ದಾರೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವದಾಗಿ ತಿಳಿಸಿದರು.
ಜಿಲ್ಲೆಯಲ್ಲಿರುವ ಕೂಲಿಕಾರ್ಮಿಕರು,ಕಾರ್ಖಾನೆಗಳ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು, ಆಟೋಚಾಲಕರು ಸೇರಿದಂತೆ ವಿವಿಧ ಸ್ಥರದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸಲು ಪಕ್ಷ ಜವಾಬ್ದಾರಿ ನೀಡಿದೆ. ಯಾವುದೇ ಸಮಸ್ಯೆ ಬಂದರೂ ಪಕ್ಷದ ನಿರ್ದೇಶನ ದಂತೆ ಸೇವೆ ಸಲ್ಲಿಸುವದಾಗಿ ತಿಳಿಸಿದರು. 9740009786 ದೂರವಾಣಿ ಸಂಖ್ಯೆಗೆ ಕರೆ ಮಾಡ ಬಹುದಾಗಿದೆ ಎಂದು ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಶ ಕೋಳಿ, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶಫಿಕ್‌ ಬೇಪಾರಿ, ಅಬುಬಕರ ಕುಡಚಿ ಮಾತನಾಡಿದರು. ಡಿಎಸ್‌ಎಸ್‌ ರಾಜ್ಯಾಧ್ಯಕ್ಷ ಶಾಮರಾವ ಘಾಟಗೆ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಶಂಕರ ಪೂಜಾರಿ, ದಾವಲ ನದಾಫ್‌, ಶರೀಫ್‌ ಮುಲ್ಲಾ, ಹಣಮಂತ ತೇಲಿ,ಮಹಮದ್‌ಸಾದ್‌ ಪಾರ್ಥನಳ್ಳಿ ಮುಂತಾದರಿದ್ದರು.
WhatsApp Group Join Now
Telegram Group Join Now
Share This Article