ಪಿ  ಸಣ್ಣ ಹೊನ್ನೂರ್ ಸಾಬ್  ಅವರಿಂದ ತತ್ವಪದ ಗಾಯನ 

MK HasiruKranti
ಪಿ  ಸಣ್ಣ ಹೊನ್ನೂರ್ ಸಾಬ್  ಅವರಿಂದ ತತ್ವಪದ ಗಾಯನ 
WhatsApp Group Join Now
Telegram Group Join Now
ಬಳ್ಳಾರಿ. ಏ. 02. : ಶ್ರೀ ಸಂತ ಶಿಶುನಾಳ ಶರೀಫ ತತ್ವಪದ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಶಂಕರಬಂಡೆ ವತಿಯಿಂದ ನಗರದ ದಾರಾದಮಿಲ್ ಅಲ್ಲಿ ಪುರದ ಜ್ಞಾನೋದಯ ಶಾಲೆಯ ಸಭಾಂಗಣದಲ್ಲಿ ಟ್ರಸ್ಟಿನ ಅಧ್ಯಕ್ಷ ಮತ್ತು ತಂಡದಿಂದ ತತ್ವಪದ ಗಾಯನವನ್ನು ಪ್ರಸ್ತುತಪಡಿಸಲಾಯಿತು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಂಕರ ಬಂಡೆ ಗ್ರಾಮ ಪಂಚಾಯತಿಯ ಮಾಜಿ  ಅಧ್ಯಕ್ಷ ಬಿ ಸಣ್ಣಬಸಪ್ಪ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಕೆ ವೆಂಕಟೇಶಲು ಬಿ ಮಲ್ಲಿಕಾರ್ಜುನ ಡಿಶ್ ನಾಗರಾಜ್ ಚಂದಾವಲಿ  ಸೇರಿದಂತೆ ಇತರರಿದ್ದರು. ದಾರದ ಮಿಲಿ ಪ್ರದೇಶದ ಹಲವಾರು ಜನ  ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತತ್ವಪದ ಗಾಯನವನ್ನು ಆಲಿಸಿ ಪುಳಕಿತರಾದರು.
WhatsApp Group Join Now
Telegram Group Join Now
Share This Article