ರನ್ನ ಬೆಳಗಲಿ: ಜು.16 : ಪಟ್ಟಣದ ಸದಾಶಿವ ನಗರದಲ್ಲಿರುವ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿಯಲ್ಲಿ ಮುಧೋಳ ತಾಲೂಕ ಮಟ್ಟದ ವಿಜ್ಞಾನ ವಿಷಯ ಸಮೂಹ ಕಾರ್ಯಗಾರ ಕಾರ್ಯಕ್ರಮವು ಜರುಗಿತು.
ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಜಿ.ಜಿ. ಕಿತ್ತೂರ ವಿಜ್ಞಾನ ಶಿಕ್ಷಕರು ತಾಲೂಕ ನೋಡಲ್ ಅಧಿಕಾರಿಗಳು ಸರಕಾರಿ ಪ್ರೌಢಶಾಲೆ ಮಳಲಿ ಅವರು ವಿಜ್ಞಾನ ತಂತ್ರಜ್ಞಾನ ವಿಷಯವನ್ನು ಮಕ್ಕಳಿಗೆ ಮುಟ್ಟಿಸೋಣ ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕೆ ಇಂತಹ ತರಬೇತಿಗಳನ್ನು ಇಲಾಖೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಇದರಲ್ಲಿ ಮನೆ ಮನೆ ಭೇಟಿ ಮಕ್ಕಳಿಗೆ ದೂರವಾಣಿ ಮೂಲಕ ಕರೆ ಮಾಡಿ ಬೆಳಗ್ಗೆ ಓದುವುದಕ್ಕೆ ಅನುಕೂಲ ಮಾಡಿಕೊಡುವುದು ಧ್ಯಾನ ಎಂಬುದು ಒಂದು ಸಾಗರ ಎಷ್ಟು: ಜ್ಞಾನ ಪಡೆದರು ತುಂಬಾ ಕಡಿಮೆ ಕೊಠಡಿಯಲ್ಲಿ ಕ್ಲಿಷ್ಟಕರ ಸಂಗತಿಗಳನ್ನು ಪರಿಹಾರ ಕೊಂಡುಕೊಳ್ಳಲಿಕ್ಕೆ, ತರಬೇತಿಗಳನ್ನು ಪಡೆಯಬೇಕು ಉತ್ತಮ ಸಂಪನ್ಮೂಲ ವ್ಯಕ್ತಿಗಳ ಮೂಲಕ ಇನ್ನೂ ಹೆಚ್ಚು ತರಬೇತಿ ಪಡೆದು ಮಕ್ಕಳಿಗೆ ಫಲಿತಾಂಶದ ಪ್ರಯೋಜನ ಪಡೆದುಕೊಳ್ಳಬೇಕು.ಹಾಗೆ ನಾವು ಮಾದರಿ ಪಾಠಗಳನ್ನು ಕೊಠಡಿಯಲ್ಲಿ ಕೊಡಬೇಕಾದರೆ ಇತರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅವಕಾಶಗಳು ಈ ತರಬೇತಿಯಲ್ಲಿ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ರವೀಂದ್ರ ಕಂಬಾರ ಅವರು ಶಿಕ್ಷಣ ಶಿಕ್ಷೆಯಾಗಬಾರದು. ಮಕ್ಕಳ ಸರ್ವತಮುಖ ಅಭಿವೃದ್ಧಿ ಬೆಳವಣಿಗೆಗೆ ಸಹಕಾರಿ ಯಾಗಬೇಕು ವಿಷಯ ಸಮೂಹವನ್ನು ಶಿಕ್ಷಕರಿಗೆ ಜ್ಞಾನವನ್ನು ಹೆಚ್ಚು ನೀಡುತ್ತದೆ. ಬೇರೆ ಬೇರೆ ಶಾಲೆಗೆ ಹೋಗಿ ವಿವಿಧ ರೀತಿಯ ಚಟುವಟಿಕೆಗಳನ್ನು ತಿಳಿದುಕೊಳ್ಳಲಿಕ್ಕೆ ಅವಕಾಶವಾಗುತ್ತದೆ. ಶಿಕ್ಷಕ ವೃತ್ತಿ ನೌಕರಿ ಎಂದು ತಿಳಿಯಬಾರದು ಇಲ್ಲದಿದ್ದರೆ ಬೇರೆ ಬೇರೆ ಇಲಾಖೆಗೂ ನಮಗೂ ಏನು ವ್ಯತ್ಯಾಸ
ಉಳಿಯುವುದಿಲ್ಲ, ಮಕ್ಕಳ ಭವಿಷ್ಯಕ್ಕೆ ನಿರಂತರ ನಿಸ್ವಾರ್ಥ ಸೇವೆಯಿಂದ ದುಡಿದಾಗ ಮಾತ್ರ ಶಿಕ್ಷಕರ ವೃತ್ತಿ ಸಾರ್ಥಕ. ಶಾಲೆ ನನಗೇನು ಕೊಟ್ಟಿದೆ ಎನ್ನುವ ಬದಲು ಮಕ್ಕಳಿಗೆ ನಾನೇನು ಕೊಟ್ಟಿದ್ದೇನೆ ಎಂಬುದು ಮುಖ್ಯ ಹಿಂದಿನ ದಿನಮಾನದಲ್ಲಿ ಗುರುಕುಲದಲ್ಲಿ ಸಂಸ್ಕಾರ ನೀಡುವ ವೃತ್ತಿ
ನಮ್ಮದಾಗಬೇಕು.ಮನುಷ್ಯನ್ನು ನಿರ್ಮಾಣ ಮಾಡುವ ಪ್ರವೃತ್ತಿ ನಮ್ಮದಾಗಬೇಕೆಂದು ಹೇಳಿದರು.
ಬಿ.ಎಂ.ಹಂಪಿಹೊಳಿ ವಿಜ್ಞಾನ ಶಿಕ್ಷಕರು ಹಲಗಲಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು ಉದ್ಘಾಟಕರಾಗಿ ಗಿರೀಶ ಸಂಕ್ರಟ್ಟಿ ಅಧ್ಯಕ್ಷರು ಎಸ್ ಡಿ ಎಂ ಸಿ ಸ್ಥಳಿಯ ಸರಕಾರಿ ಪ್ರೌಢಶಾಲೆ,ಎಸ್.ಐ ಗಂಗಾವತಿ. ಉಪಸ್ಥಿತರಿದ್ದರು ಕುಮಾರ ಮಹಂತೇಶ ಲೋಕಾಪುರ ಅಲಂಕಾರ ವಸ್ತುಗಳ ತಯಾರಿಕೆಯ ಮಾಹಿತಿಯನ್ನು
ನೀಡಿದರು. ಬಿ.ಪಿ.ಚೋಪಡೆ ಚಿತ್ರಕಲಾ ಶಿಕ್ಷಕರು ಕಾರ್ಯಕ್ರಮ ನಿರುಪಿಸಿದರು, ಮಾಚಕನೂರ ಶಿಕ್ಷಕರಿಂದ ವಂದನಾರ್ಪಣೆ ನೆರವೇರಿತು.