ವಿಜ್ಞಾನ ಮತ್ತು ಗಣಿತ ಮೇಳ – ತಮ್ಮ ಪ್ರತಿಭೆ ಮೆರೆದ ವಿದ್ಯಾರ್ಥಿಗಳು

Sandeep Malannavar
ವಿಜ್ಞಾನ ಮತ್ತು ಗಣಿತ ಮೇಳ – ತಮ್ಮ ಪ್ರತಿಭೆ ಮೆರೆದ ವಿದ್ಯಾರ್ಥಿಗಳು
WhatsApp Group Join Now
Telegram Group Join Now
ಬಳ್ಳಾರಿ, ಜ. 22:: ನಗರದ ಶಾರದಾ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಮೇಳವನ್ನು ಉತ್ಸಾಹಭರಿತವಾಗಿ ಹಮ್ಮಿಕೊಳ್ಳಲಾಗಿತ್ತು. ಮೇಳವನ್ನು ಶಾಲೆಯ ಉಪಾಧ್ಯಕ್ಷರಾದ ಶ್ರೀಮತಿ ಡಾ. ನಾಗರತ್ನ ಸುಯಜ್ಞ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಹರಿಕುಮಾರ್ ಮತ್ತು ಶ್ರೀಯುತ ರಂಗನಾಥ ಅವರು ಉದ್ಘಾಟಿಸಿದರು.
ಮೇಳದಲ್ಲಿ ಬೇಬಿ ಕ್ಲಾಸ್‌ನಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ಭಾಗವಹಿಸಿ, ಗಣಿತ ಹಾಗೂ ವಿಜ್ಞಾನ ಸಂಬಂಧಿತ ವಿವಿಧ ಪ್ರಯೋಗಗಳು ಮತ್ತು ಮಾದರಿಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಚಂದ್ರಯಾನ, ರಾಕೆಟ್ ಹಾಗೂ ತುಂಗಭದ್ರಾ ಅಣೆಕಟ್ಟಿನ ಮಾದರಿಗಳನ್ನು ನಿರ್ಮಿಸಿ ತಮ್ಮ ಪ್ರತಿಭೆಯನ್ನು ಮೆರೆದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಶ್ರಮ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಕವಿತಾ ವಾದಿರಾಜ್ ಅವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹುರಿದುಂಬಿಸಿ, ವಿಜ್ಞಾನ–ಗಣಿತ ಮೇಳ ಯಶಸ್ವಿಯಾಗಲು ಪ್ರಮುಖ ಪಾತ್ರವಹಿಸಿದರು.
WhatsApp Group Join Now
Telegram Group Join Now
Share This Article