ಗುರು ಹಿರಿಯರನ್ನು ಆತ್ಮೀಯವಾಗಿ ನೋಡಿಕೊಳ್ಳಿ : ಬಸವರಾಜ ಹಟ್ಟೀಗೌಡರ

Ravi Talawar
ಗುರು ಹಿರಿಯರನ್ನು ಆತ್ಮೀಯವಾಗಿ ನೋಡಿಕೊಳ್ಳಿ : ಬಸವರಾಜ ಹಟ್ಟೀಗೌಡರ
WhatsApp Group Join Now
Telegram Group Join Now
ಘಟಪ್ರಭಾ. ಇಂದಿನ ದಿನಮಾನದಲ್ಲಿ ಹಿರಿಯರ ಭಾವನೆಗಳನ್ನು ನಾವೆಲ್ಲರೂ ಗೌರವಿಸಬೇಕು ಮತ್ತು ಅವರನ್ನು ಆತ್ಮೀಯತೆಯಿಂದ ನೋಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದ್ದು  ಹಿರಿಯರ ನಾಗರೀಕರ ಮನಸ್ಸು ಸೂಕ್ಷ್ಮತೆಯಿಂದ ಕೂಡಿರುತ್ತದೆ ಅವರಿಗೆ ಶಾಂತಿ ಸಹನೆಗಳಿಂದ ವರ್ತನೆ ನಾವು ಮಾಡಿದರೆ ಅವರು ಸಹ ಶಾಂತವಾಗಿರುತ್ತಾರೆ ಎಂದು ಭಾರತ ಸೇವಾ ದಳದ  ಕರ್ನಾಟಕ   ರಾಜ್ಯ ನಿವೃತ್ತ ರಾಜ್ಯಾಧಿಪತಿಗಳಾದ ಬಸವರಾಜ ಹಟ್ಟೀಗೌಡರ ಅವರು ಹೇಳಿದರು.
          ಅವರು  ಘಟಪ್ರಭಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ದಿನಾಂಕ, 14-10-2025 ರಂದು ಘಟಪ್ರಭಾ ಹಿರಿಯ ನಾಗರಿಕರ ವೇದಿಕೆ ಮತ್ತು ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ಇವರು ಸಂಯುಕ್ತವಾಗಿ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಸುರೇಶ ಪಾಟೀಲ ಮತ್ತು ಪುಂಡಲೀಕ ನಾಯಿಕ  ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು
       ಅತಿಥಿ  ರಾಮಣ್ಣ ಹುಕ್ಕೇರಿ ಮಾತನಾಡಿ ಹಿರಿಯ ನಾಗರಿಕರು ತಮ್ಮ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನು ಮಾಡಿರುತ್ತಾರೆ ಅವರ ಭಾವನೆಗಳನ್ನು ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರು ಗೌರವಿಸುವದು ಆದ್ಯ ಕರ್ತವ್ಯವಾಗಿದೆ ಎಂದರು.
      ಸತ್ಕಾರ ಸ್ವೀಕರಿಸಿದ ಸುರೇಶ ಪಾಟೀಲ ಮತ್ತು ಪುಂಡಲೀಕ ನಾಯಿಕ ಅವರು ಮಾತನಾಡಿ ಎಲ್ಲಾ ಹಿರಿಯ ನಾಗರಿಕರು ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ರಂಗಗಳಲ್ಲಿ ಸಕ್ರಿಯವಾಗಿ  ಭಾಗವಹಿಸಿ ಸಾಮಾಜಿಕ ಸೇವೆ ಮಾಡುವ ಮೂಲಕ ಸಾರ್ಥಕ ಬದುಕು ಸಾಧಿಸಬೇಕು ಎಂದು ಸನ್ಮಾನ ಮಾಡುವ ಮೂಲಕ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದರು.
        ಜೈಂಟ್ಸ್ ಗ್ರೂಪ್ ಆಫ್ ಘಟಪ್ರಭಾ ಅಧ್ಯಕ್ಷ ಭೂಪಾಲ್ ಖೆಮಲಾಪುರೆ, ಮತ್ತು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿ ಹಿರಿಯ ನಾಗರಿಕರ ಯಾವುದೇ ತೊಂದರೆಗಳು ಇದ್ದರೂ ಪರಿಹರಿಸಲು ನಾವು ಸದಾ ಸಹಾಯ ಮಾಡುತ್ತೇವೆ ಎಂದರು.
               ಹಿರಿಯ  ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಸುಭಾಷ್ ದಡ್ಡೀಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
        ಕಾರ್ಯಕ್ರಮದಲ್ಲಿ ಕೆ ಡಿ ವಾಲಿಕಾರ, ಕೆ ಪಿ ಕಳ್ಳೀಮಠ  ಮಹಾದೇವ ಯರನಾಳ, ರಾಜು ಕತ್ತಿ, ಮಲ್ಲಪ್ಪ ನಾಯಿಕ ಪ್ರಭಾಕರ ಸುಳೆಗಾವಿ, ಹರಿ ಪ್ರಕಾಶ ಕಾಳೆ, ಕೆಂಚಪ್ಪಾ ಪಾಟೀಲ ಪಶುಪತಿಮಠ ಚಿರಾಕಲಿಶಾ ಮಕಾನದಾರ, ಪ್ರಕಾಶ ಕುಲಕರ್ಣಿ,  ಮುರಳೀಧರ ಜತ್ಕರ  ಪ್ರಭು ಅಂತರಗಂಗಿ, ಶಂಕರ ವಾಘ, ಮನಗುತ್ತಿ, ಮಹಾದೇವ ಬಡೋದೆ, ಮಣಿಕಂಠ ನಾಯಿಕ ಕೆಂಚಪ್ಪಾ ನಾಯಿಕ  ಸೇರಿದಂತೆ ಹಲವು ನಾಗರಿಕರು ಭಾಗವಹಿಸಿದ್ದರು.ಕಾರ್ಯಕ್ರಮದ ನಿರೂಪಣೆ, ಸ್ವಾಗತವನ್ನು ಅರ್ಥಗರ್ಭಿತವಾಗಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಮಹಾಜನ ನೆರವೇರಿಸಿದರು.
WhatsApp Group Join Now
Telegram Group Join Now
Share This Article