ಸುಜ್ಞಾನ ನಿಧಿ ಶಿಷ್ಯವೇತನದ  ಪ್ರಯೋಜನ ಪಡೆದುಕೊಳ್ಳಿ: ಶ್ರೀಮತಿ ದಯಾಶೀಲ 

Pratibha Boi
ಸುಜ್ಞಾನ ನಿಧಿ ಶಿಷ್ಯವೇತನದ  ಪ್ರಯೋಜನ ಪಡೆದುಕೊಳ್ಳಿ: ಶ್ರೀಮತಿ ದಯಾಶೀಲ 
WhatsApp Group Join Now
Telegram Group Join Now
ಬೈಲಹೊಂಗಲ.ತಾಲೂಕಿನ  ಅಮಟೂರು  ಗ್ರಾಮದಲ್ಲಿ  ಶನಿವಾರದಂದು  ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ  ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಗ್ರಾಮೀನಾಭಿವೃದ್ಧಿ ಯೋಜನೆ ಸಹಯೋಗದಲ್ಲಿ  ಆಯೋಜಿಸಲಾಯಿತು.
        ಕಾರ್ಯಕ್ರಮದ  ಅಧ್ಯಕ್ಷತೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ರಾಘವೇಂದ್ರ ಸಂಗಪ್ಪನವರ ಅವರು  ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಧಾರವಾಡ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲಾ, ಮುಖ್ಯ ಅತಿಥಿಗಳಾಗಿ ವೀರಕೇಸರಿ ಅಮಟೂರು ಬಾಳಪ್ಪ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ  ಸೋಮನಗೌಡ ನಾಗನಗೌಡ ಪಾಟೀಲ, ಬೆಳಗಾವಿ  ಜಿಲ್ಲೆಯ ಯೋಜನೆಯ ನಿರ್ದೇಶಕರಾದ  ಸತೀಶ ನಾಯ್ಕ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಶಿಕಲಾ ಅನಿಗೋಳ, ಕೆಂಗನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ  ಯಲ್ಲಪ್ಪ ಹುಲಗನ್ನವರ,    ದುಂಡಪ್ಪ ಕಾಲಗಗಿರಿ,  ನಾರಾಯಣ್ ನಲವಡಿ, ವಿಠ್ಠಲ್ ಪೀಸೆ, ತಾಲೂಕ  ಯೋಜನಾಧಿಕಾರಿಗಳಾದ ವಿಜಯ್ ಕುಮಾರ ಇವರುಗಳು  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
      ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲಾ ಮಾತನಾಡಿ  ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮ ಅಭಿವೃದ್ಧಿ ಯೋಜನೆ ನಡೆದ ಬಂದ ದಾರಿ ಕ್ಷೇತ್ರದಿಂದ ನಡೆಯುವಂತಹ  ಅಭಿವೃದ್ಧಿ ಕಾರ್ಯಗಳು, ಸ್ವಸಹಾಯ ಸಂಘಗಳ ಮಹತ್ವ, ಮಾಶಾಸನ ವಿತರಣೆ, ವಾತ್ಸಲ್ಯ ಮನೆ ರಚನೆ, ಜನಮಂಗಳ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡುವ ಅನುದಾನಗಳ ಬಗ್ಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಸ್ವಸಹಾಯ ಸಂಘದವರಿಗೆ ನೀಡುವ ಪ್ರಗತಿ ನಿಧಿ ಬಗ್ಗೆ  ಮಾಹಿತಿ ನೀಡಿದರು. ನಂತರ ತಾಲೂಕಿನಲ್ಲಿ ಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಆದ 105 ಜನ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ಹಸ್ತಾಂತರ ಮಾಡಿದರು.
         ಅಮಟೂರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮನಗೌಡ  ಪಾಟೀಲ ಮಾತನಾಡಿ  ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುದರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ.ಹಾಗೂ ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂದರು.
      ಕಾರ್ಯಕ್ರಮದ ನಿರೂಪಣೆ ಜ್ಞಾನವಿಕಾಸ ಸಮನ್ವಧಿಕಾರಿ ಶ್ರೀಮತಿ ಶೈಲಾ ಜಕ್ಕನವರ,ತಾಲೂಕಾ ಯೋಜನಾಧಿಕಾರಿ
 ವಿಜಯ್ ಕುಮಾರ ಸ್ವಾಗತಿಸಿದರು.
 ವಲಯದ ಮೇಲ್ವಿಚಾರಕ ಮಹಾಂತೇಶ್ ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಕೃಷಿ ಅಧಿಕಾರಿ ರವಿ, ಸೇವಾ ಪ್ರತಿನಿಧಿ ಐಶ್ವರ್ಯ ಒಕ್ಕೂಟದ ಅಧ್ಯಕ್ಷರು, ಅಮಟೂರು,ಬೇವಿನಕೊಪ್ಪ ಕೆಂಗನೂರು, ಬೆಳವಡಿ, ಲಿಂಗದಳ್ಳಿ, ಜಾಲಿ ಕೊಪ್ಪ, ನಯನಗರ ಸಮಸ್ತ  ಸದಸ್ಯರು ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.
WhatsApp Group Join Now
Telegram Group Join Now
Share This Article