ಬೆಳಗಾವಿ (ಡಿ.12) ಬೆಳಗಾವಿಯ ಹಿರಿಯ ತಬಲಾ ವಾದಕ ಜಿ. ಎ. ಕುಲಕರ್ಣಿ ( ಬಂಡೂ ಮಾಸ್ತರ್) ಅವರ ಪುತ್ರ ಸಂತೋಷ ಕುಲಕರ್ಣಿ ಅವರು ಕತಾರ್ ನ ದೋಹಾದಲ್ಲಿ ಸತತ 4 ತಾಸು, 1 ನಿಮಿಷ, 6 ಸೆಕೆಂಡ್ ಸತತ ತಬಲಾ ವಾದನ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅವರ ಹೆಸರು ದಾಖಲಾಗಿದೆ. ಕಳೆದ ಅಕ್ಟೋಬರ್ 25 ರಂದು ಸಂತೋಷ ಕುಲಕರ್ಣಿ ಅವರು ಈ ಸಾಧನೆ ಮಾಡಿದ್ದು ಬೆಳಗಾವಿಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಅವರಿಗೆ ಅಭಿನಂದನೆಗಳು.
ತಬಲಾವಾದಕ ಸಂತೋಷ ಕುಲಕರ್ಣಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲು


