ಡಾ. ಬಿ.ಆರ್ ಅಂಬೇಡ್ಕರ್ ಸಂಘಕ್ಕೆ ನಿಯಮಭಾಹಿರವಾಗಿ ನೇಮಕಗೊಂಡ ಪದಾಧಿಕಾರಿಗಳನ್ನು ರದ್ದುಪಡಿಸಿ : ಟಿ ಪಂಪಾಪತಿ ಅಗ್ರಹ

Hasiru Kranti
ಡಾ. ಬಿ.ಆರ್ ಅಂಬೇಡ್ಕರ್ ಸಂಘಕ್ಕೆ ನಿಯಮಭಾಹಿರವಾಗಿ ನೇಮಕಗೊಂಡ ಪದಾಧಿಕಾರಿಗಳನ್ನು ರದ್ದುಪಡಿಸಿ : ಟಿ ಪಂಪಾಪತಿ ಅಗ್ರಹ
WhatsApp Group Join Now
Telegram Group Join Now
ಬಳ್ಳಾರಿ. ಜ. 03: ಬಳ್ಳಾರಿ ಜಿಲ್ಲಾ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘವು 1977ರಲ್ಲಿ ಸ್ಥಾಪನೆಯಾಗಿದ್ದು ಸಂಘ ಸಂಸ್ಥೆಯ ನಿಯಮಾವಳಿಗಳಂತೆ ಮತ್ತು ಸಹಕಾರ ಇಲಾಖೆಯ ನಿಬಂಧನೆಗಳಂತೆ ಇಲ್ಲಿಯವರೆಗೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಸಂಘದಲ್ಲಿ ಈ ಹಿಂದೆ ಉಚ್ಚಾಟಿತಗೊಂಡ  ಕೆಲವೊಂದು ಜನ ಸದಸ್ಯರು  ಕಾನೂನು ಬಾಹಿರವಾಗಿ ಕೇವಲ 44 ಜನ ಸದಸ್ಯರ ಇಟ್ಟುಕೊಂಡು 14 ಜನ ನಿರ್ದೇಶಕರುಗಳನ್ನು ಆಯ್ಕೆ ಮಾಡಿಕೊಂಡು ಆ ನಿರ್ದೇಶಕರಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಇದು ಸಂಘ ಸಂಸ್ಥೆಯ ನಿಯಮ ನಿಬಂಧನೆಗಳ ಸ್ಪಷ್ಟವಾದ ಉಲ್ಲಂಘನೆ ಆಗಿರುತ್ತದೆ ಹಾಲಿ ಪದಾಧಿಕಾರಿಗಳನ್ನಾಗಿ  ನಿಬಂಧನೆಗೆ ವಿರುದ್ಧವಾಗಿ ಆಯ್ಕೆ ಮಾಡಿಕೊಂಡಿರುವ ಚಿದಾನಂದಪ್ಪ ಎರ್ಕುಲ ಸ್ವಾಮಿ ವಿಜಯ್ ಕುಮಾರ್ ಗೋವಿಂದರಾಜುಲು ತಿಪ್ಪೇಸ್ವಾಮಿ ಸೇರಿದಂತೆ ಇತರ ಪದಾಧಿಕಾರಿಗಳನ್ನು ರದ್ದುಗೊಳಿಸಿ ಎಂದು ಬಳ್ಳಾರಿ ಜಿಲ್ಲಾ ಡಾ. ಬಿಆರ್ ಅಂಬೇಡ್ಕರ್ ಸಂಘದ ಟಿ ಪಂಪಾಪತಿ ಸಂಘ ಸಂಸ್ಥೆ ನೊಂದಣಿ ಉಪನಿಬಂಧಕರನ್ನು ಆಗ್ರಹಿಸಿದ್ದಾರೆ.
 ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ಸಂಘವು ಹಲವು ದಶಕಗಳಿಂದ ಸುಸೂತ್ರವಾಗಿ ನಡೆದರು ಆ ಸಂಘದಲ್ಲಿ ಯುವಕರಿಗೆ ಸದಸ್ಯತ್ವವನ್ನು
ನೀಡದೆ ಕೇವಲ 238 ಜನ ಮಾತ್ರ ಸದಸ್ಯರುಗಳಾಗಿ ಮುಂದುವರೆಯುತ್ತಾ ನಮ್ಮ ಮಾದಿಗ ಜನಾಂಗದ ಯುವಕರಿಗೆ ಅನ್ಯಾಯ ಸಿಗುತ್ತಿದ್ದಾರೆ ಈ ಪದಾಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಎಂದ ಪಂಪಾಪತಿ, ನಮ್ಮ ಬಣದ ಸುಮಾರು 24 ಜನ ಸದಸ್ಯರು ಸಭೆ ಸೇರಿ ಸಂಘಕ್ಕೆ 25 ಜನ ನಿರ್ದೇಶಕರುಗಳನ್ನು ಆಯ್ಕೆ ಮಾಡಿಕೊಂಡು ಆ ನಿರ್ದೇಶಕರುಗಳಲ್ಲಿ ಗೌರವ ಅಧ್ಯಕ್ಷರಾಗಿ ಏ ಈಶ್ವರಪ್ಪ, ಬಿ ಶೇಖಣ್ಣ, ಕಾರ್ಯಾಧ್ಯಕ್ಷರಾಗಿ ಎಚ್ ರಮೇಶ್ ಗೋನಾಳ್,  ಅಧ್ಯಕ್ಷರಾಗಿ ಟೀ ಪಂಪಾಪತಿ, ಮೋಹನ್ ಕೆ ನರಸಿಂಹ ಬಾಬು ಬಿ ದಾನಪ್ಪ ಬಿ ಈ ರಾಜೇಶ್ ಉಪಾಧ್ಯಕ್ಷರಾಗಿ, ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ ವೆಂಕಟೇಶಮೂರ್ತಿ ಖಜಾಂಚಿಯಾಗಿ ಪ್ರಸಾದ್ ಸಹ ಕಾರ್ಯದರ್ಶಿಯಾಗಿ ಶಿವಶಂಕರ್ ಸಂಘಟನಾ ಕಾರ್ಯದರ್ಶಿಯಾಗಿ ಸಿ ಕೃಷ್ಣಮೂರ್ತಿ ಇವರುಗಳನ್ನು ಸರ್ವ ಸಮ್ಮತವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ನಮ್ಮದೇ ನಿಜವಾದ ಅಂಬೇಡ್ಕರ್ ಎಂದು ಅವರು ತಿಳಿಸಿದರು.
 ವೆಂಕಟೇಶ್ ಮೂರ್ತಿ ಮಾತನಾಡಿ, ನಾವು ಈ ಕುರಿತು ಈಗಾಗಲೇ ಉಪನಿಬಂಧಕರು ಸಂಘ-ಸಂಸ್ಥೆ ನೋಂದಣಿ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೂ ದೂರನ್ನು ನೀಡಿದ್ದೇವೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು. ಜೈ ಗೋಪಾಲ್ ಮಾತನಾಡಿ ನಮ್ಮ ಮಾದಿಗ ಸಮುದಾಯದಲ್ಲಿ ಹಲವಾರು ಜನ ಯುವಕರು ವಿದ್ಯಾವಂತರಿದ್ದು ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಅಂತವರನ್ನು ಸಂಘಕ್ಕೆ  ಸದಸ್ಯರನ್ನಾಗಿ ಸದಸ್ಯತ್ವವನ್ನು ನೀಡಬೇಕೆಂದು ಆಗ್ರಹಿಸಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ತಳವಾರ್ ದುರ್ಗಪ್ಪ ಆರ್ ಶಿವಶಂಕರ್ ಅರುಣಾಚಲಂ ಜೆ ಮಲ್ಲಿಕಾರ್ಜುನ ಭೀಮ ದಾಸ್ ನಾಗಭೂಷಣ್ ನಾಗರಾಜ್ ರಮೇಶ್ ರಾಮಾಂಜನಿ ಸೇರಿದಂತೆ  ಇತರರಿದ್ದರು.
WhatsApp Group Join Now
Telegram Group Join Now
Share This Article