ಸ್ವಾತಿ ಮಲಿವಾಲ್​ ಹಲ್ಲೆ ಪ್ರಕರಣ: ಪೊಲೀಸರು ಇಂದು ಕೇಜ್ರಿವಾಲ್ ಪೋಷಕರ ಹೇಳಿಕೆ ಪಡೆಯುವುದಿಲ್ಲ

Ravi Talawar
ಸ್ವಾತಿ ಮಲಿವಾಲ್​ ಹಲ್ಲೆ ಪ್ರಕರಣ: ಪೊಲೀಸರು ಇಂದು ಕೇಜ್ರಿವಾಲ್ ಪೋಷಕರ ಹೇಳಿಕೆ ಪಡೆಯುವುದಿಲ್ಲ
WhatsApp Group Join Now
Telegram Group Join Now

ದೆಹಲಿ,23: ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಆಪ್ತ ಕಾರ್ಯದರ್ಶಿ ವಿಭವ್​ ಕುಮಾರ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್​ ಮೇಲೆ ನಡೆಸಿದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಪೋಷಕರ ಹೇಳಿಕೆ ಪಡೆಯಲು ದೆಹಲಿ ಪೊಲೀಸರು ಮುಂದಾಗಿದ್ದು ಆದರೆ ಇಂದು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಸ್ವಾತಿ ಮಲಿವಾಲ್​ಗೆ ಕಪಾಳ ಮೋಕ್ಷ ಮಾಡಿ, ಹೊಟ್ಟೆಗೆ ಒದ್ದಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಬರೆಯಲಾಗಿದೆ. ಆದರೆ ಇಂದು ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರ ಪೋಷಕರ ಹೇಳಿಕೆ ಪಡೆಯಲು ಬರುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಶಿಸುವುದಾಗಿ ತಿಳಿಸಿದ್ದರು.

WhatsApp Group Join Now
Telegram Group Join Now
Share This Article