ಸ್ವಸ್ಥ ನಾರಿ-ಸಶಕ್ತ ಪರಿವಾರ ಅಭಿಯಾನ” ಕಾರ್ಯಕ್ರಮ

Ravi Talawar
ಸ್ವಸ್ಥ ನಾರಿ-ಸಶಕ್ತ ಪರಿವಾರ ಅಭಿಯಾನ” ಕಾರ್ಯಕ್ರಮ
WhatsApp Group Join Now
Telegram Group Join Now
ಸೆ.17 ರಿಂದ ಅ.02 ರವರೆಗೆ ಮಹಿಳೆಯರು, ಮಕ್ಕಳ ಆರೋಗ್ಯ ತಪಾಸಣೆಗಾಗಿ ವಿಶೇಷ ಆರೋಗ್ಯ ಶಿಬಿರ: ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ,ಸೆ.17. ಕೇಂದ್ರ ಸರ್ಕಾರದ “ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ” ಮತ್ತು ಎಂಟನೇ ‘ಪೋಷಣ್ ಮಾಹೆ’ ಕಾರ್ಯಕ್ರಮಕ್ಕೆ ಪ್ರಧಾನಿಮಂತ್ರಿ ಮೋದಿ ಅವರು ದೇಶದಾದ್ಯಂತ ಏಕಕಾಲಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದು, ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಗುರ್ತಿಸಿ ಚಿಕಿತ್ಸೆ ನೀಡುವಂತೆ ಈ ಅಭಿಯಾನದ ಮೂಲಕ ಸೇವಾ ಸೌಲಭ್ಯಗಳನ್ನು ಒದಗಿಸುವುದಾಗಿದೆ.
ಈ ಅಭಿಯಾನದ ಹಿನ್ನಲೆಯಲ್ಲಿ ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೆಶ್ ಬಾಬು, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ ವರ್ಚುವಲ್ ಮೂಲಕ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೆಶ್ ಬಾಬು ಅವರು, ಸ್ವಸ್ಥ ನಾರಿ-ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಮಹಿಳೆಯರು, ಮಕ್ಕಳ ನಿರ್ದಿಷ್ಟ ಆರೋಗ್ಯ ಮತ್ತು ಪೌಷ್ಟಿಕಾಂಶದ ಅಗತ್ಯತೆಗಳನ್ನು ಪೂರೈಸಲು ಆಯುಷ್ಮಾನ್ ಆರೋಗ್ಯ ಮಂದಿರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಎಲ್ಲಾ ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಇತರೆ ಸೇವೆ: ಕಿವಿ, ಕಣ್ಣು, ಮೂಗು, ಗಂಟಲು, ರಕ್ತದೊತ್ತಡ, ಮಧುಮೇಹ ಮತ್ತು ದಂತ ಪರೀಕ್ಷೆ, ಕ್ಯಾನ್ಸರ್-ಬಾಯಿ/ಸ್ತನ/ಗರ್ಭಾಶಯದ ಬಾಯಿ ಪರೀಕ್ಷೆ ಗರ್ಭಿಣಿ ಮಹಿಳೆಯರಿಗಾಗಿ ಪ್ರಸವಪೂರ್ವ ಪರೀಕ್ಷೆ, ಲಸಿಕೆ ಸೇವೆಗಳು, ರಕ್ತಹೀನತೆ ಮಟ್ಟ, ಟೆೆಲಿಮನಸ್ ಸೌಲಭ್ಯಗಳು, ಕ್ಷಯರೋಗ ಪರೀಕ್ಷೆ ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷೆ ಮತ್ತು ಇತರೆ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.
ತಾಯಿ ಮತ್ತು ಮಗು ರಕ್ಷಣೆ ಕಾರ್ಡ್, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ನೋಂದಣಿ, ಆಯುಷ್ಮಾನ್ ವಯ್ ವಂದನಾ ಕಾರ್ಡ್, ಪೌಷ್ಠಿಕ ಟ್ರ‍್ಯಾಕರ್‌ನಲ್ಲಿ ಫಲಾನುಭವಿಗಳ ನೋಂದಣಿ ಮೂಲಕ ಆರೋಗ್ಯ ಸೇವೆಗಳ ಪ್ರವೇಶ ಸುಲಭಗೊಳಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಮುಖ್ಯವಾಗಿ ಆರೋಗ್ಯಕರ ಜೀವನಶೈಲಿ ಮತ್ತು ಆರೋಗ್ಯ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು. ಸಕ್ಕರೆ ಮತ್ತು ಆಹಾರ ಎಣ್ಣೆಗಳಲ್ಲಿ ಶೇ.10ರಷ್ಟು ಸೇವನೆ ಇಳಿಕೆಯಿಂದ ದೇಹದ ಕೊಬ್ಬು ಕಡಿಮೆ ಮಾಡಬೇಕು. ಸ್ಥಳೀಯ ಮತ್ತು ಪ್ರಾದೇಶಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಋತುಚಕ್ರದ ಸ್ವಚ್ಛತೆ ಮತ್ತು ಪೌಷ್ಟಿಕಾಂಶದ ಬಗ್ಗೆ ಅರಿವು ಹೊಂದಬೇಕು ಎಂದು ಅವರು ತಿಳಿಸಿದರು.
ರಕ್ತದಾನ ಶಿಬಿರ, ನಿಕ್ಷಯ್ ಮಿತ್ರ ಸ್ವಯಂ ಸೇವಕರ ನೋಂದಣಿ, ಅಂಗಾAಗ ದಾನ ನೋಂದಣಿಯಲ್ಲಿ ನಾಗರಿಕರ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಶುಶೂಷ್ರಾಧಿಕಾರಿಗಳು ಸೇರಿದಂತೆ ಮಹಿಳೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article