ಬಾಗಲಕೋಟೆ:(ಡಿ.13), ಆತ್ಮ ನಿರ್ಭರ ಭಾರತವನ್ನು ನಿರ್ಮಿಸುವಲ್ಲಿ ಪ್ರತಿ ಮನೆಮನೆಯಲ್ಲೂ ಸ್ವದೇಶಿ ಬಳಕೆ ಅಗತ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ಅವರು ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಲ್ಲಿ ಸ್ವದೇಶಿ ಬಳಸಿ ದೇಶ ಉಳಿಸಿ-ಪ್ರತಿ ಮನೆಮನೆಯೂ ಸ್ವದೇಶಿ ಎಂಬ ಅಭಿಯಾನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ನಮ್ಮ ಸದಸ್ಯರು ಕಾರ್ಯಕರ್ತರು ಪ್ರತಿ ಮನೆಗೂ ತೆರಳಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ, ಭಾರತ ಸಮೃದ್ದಿಯ ರಾಷ್ಟç, ವಿಶ್ವದಲ್ಲಿ ಇಂದು ತನ್ನದೆಯಾದ ಛಾಪನ್ನು ಮೂಡಿಸುತ್ತಿದೆ, ಆಮದು ಕಡಿಮೆಯಾಗಿ ರಪ್ತು ಜಾಸ್ತಿಯಾಗಬೇಕು, ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕು, ಮನೆಗಳಲ್ಲಿ ಬಳಸುವ ವಸ್ತು ಸ್ವದೇಶಿ ಇರುವಂತೆ, ಸ್ಥಳಿಯ ಉತ್ಪನ್ನವನ್ನೇ ಖರಿದಿಸುವಂತೆ ಗಮನಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಡಾ,ವೀರಣ್ಣ ಚರಂತಿಮಠ ಮಾತನಾಡಿ ಏಕ್ ಭಾರತ ಶ್ರೇಷ್ಠ ಭಾರತ, ಆತ್ಮ ನಿರ್ಭರ ಭಾರತ ಹಾಗೂ ಮೇಕ ಇನ್ ಇಂಡಿಯಾ ಮೂಲಕ ಸ್ವಾಭಿಮಾನಿ-ಸ್ವಾವಲಂಭಿ ಭಾರತ ನಿರ್ಮಾಣದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಬಿತ್ತಿದರು, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇನೆಯ ಶಸ್ತಾçಸ್ತçಗಳಲ್ಲಿ ಭಾರತ ಆತ್ಮ ನಿರ್ಭರವಾಗಿದೆ, ಭಾರತದ ಸರ್ವಾಂಗಿಣ ಅಭಿವೃದ್ಧಿಗೆ ಸ್ವದೇಶಿ ಬಳಕೆ ಅಗತ್ಯವಾಗಿದೆ, ಸ್ವದೇಶಿ ಸಂಕಲ್ಪದ ಕರೆಯ ಮೇರೆಗೆ ನಡೆಯಲಿರುವ ಆತ್ಮ ನಿರ್ಭರ ಭಾರತ ಸ್ವದೇಶಿ ಬಳಸಿ ಅಭಿಯಾನದಲ್ಲಿ ಎಲ್ಲ ಕಾರ್ಯಕರ್ತರು ತೊಡಗಿಸಿಕೊಂಡು ಜನಜಾಗೃತಿ ಮೂಡಿಸೋಣ ಎಂದರು.
ಪ್ರಾಸ್ತಾವಿಕವಾಗಿ ಬಸವರಾಜ ಯಂಕಂಚಿ ಮಾತನಾಡಿದರು, ವೇದಿಕೆ ಮೇಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಕೊಣ್ಣೂರ,ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಸತ್ಯನಾರಾಯಣ ಹೆಮಾದ್ರಿ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಜಿ,ಎನ್, ಪಾಟೀಲ, ಸಂಗಣ್ಣ ಕಲಾದಗಿ, ಕುಮಾರ ಯಳ್ಳಿಗುತ್ತಿ, ಸುಜಾತಾ ಶೀಂದೆ, ಬಸವರಾಜ ಅವರಾದಿ, ಶಿವಾನಂದ ಟವಳಿ, ಗುಂಡುರಾವ ಶಿಂದೆ, ಜ್ಯೋತಿ ಭಜಂತ್ರಿ, ನಾಗರತ್ನಾ ಹೆಬ್ಬಳ್ಳಿ, ಶಶಿಕಲಾ ಮಜ್ಜಗಿ, ಸರಸ್ವತಿ ಕುರುಬರ, ಪ್ರೇಮಾ ಅಂಬಿಗೇರ, ಶೈಲಜಾ ಸಂಗಳದ,ಶಿವಲೀಲಾ ಸಂಭನ್ನವರ, ಸುನಂದಾ ಹಿರೇಮಠ, ರಾಜು ಶಿಂತ್ರೆ, ವೆಂಕಣ್ಣ ಹಡಗಲಿ, ಯಲ್ಲಪ್ಪ ನಾರಾಯಣಿ,ಶಂಗರ ಗಲಗ, ಸಿದ್ದಣ್ಣ ಲೋಕಾಪುರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.


