ಪಿಎಂ ಕೇರ್ಸ್ ಫಂಡ್ ಮೇಲೂ ಶುರುವಾಯ್ತು ಅನುಮಾನ: ತನಿಖೆಗೆ ಆಗ್ರಹ

Ravi Talawar
ಪಿಎಂ ಕೇರ್ಸ್ ಫಂಡ್ ಮೇಲೂ ಶುರುವಾಯ್ತು ಅನುಮಾನ: ತನಿಖೆಗೆ ಆಗ್ರಹ
WhatsApp Group Join Now
Telegram Group Join Now

ಬೆಂಗಳೂರು,06: ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದು ಘೋಷಿಸಲ್ಪಟ್ಟ ಬೆನ್ನಲ್ಲೇ, ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಇದೀಗ ಅನುಮಾನಗಳು ಮೂಡತೊಡಗಿದ್ದು, ಇದರ ಬಗ್ಗೆಯೂ ತನಿಖೆ ನಡಸಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

ಚುನಾವಣಾ ಬಾಂಡ್‌ಗಳ ಮೂಲಕ ಪಾರದರ್ಶಕತೆಯನ್ನು ತಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು, ಆದರೆ, ಹಗರಣ ಬಯಲಿಗೆ ಬಂದಿದೆ. ಇದೀಗ ಪಿಎಂ ಕೇರ್ಸ್ ನಿಧಿಯನ್ನು ಯಾವುದಕ್ಕೆ ಬಳಸಲಾಗುತ್ತಿದೆ, ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಕಲ್ಯಾಣ ಯೋಜನೆಗಳ ಹಣ ಆರ್‌ಎಸ್‌ಎಸ್‌ಗೆ ಹೋಗಿವೆ. ಇಂದು, ಆರ್‌ಎಸ್‌ಎಸ್ ಸೈನಿಕ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳ ಮೇಲೆ ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿದೆ. ಸರಕಾರ ಹಲವಾರು ಶಾಲೆಗಳನ್ನು ಅವರಿಗೆ ಹಸ್ತಾಂತರಿಸಿದೆ. ಅದು ಯಾರ ಆಸ್ತಿ? ಖಾಸಗಿ ಸಂಸ್ಥೆಗಳಿಗೆ ಶಾಲೆಗಳ ನಿಯಂತ್ರಣವನ್ನು ನೀಡಿದರೆ, ಮೀಸಲಾತಿ ಏನಾಗುತ್ತದೆ? ಇಂತಹ ಶಾಲೆಗಳಲ್ಲಿ ಬಡವರಿಗೆ ಸೀಟು ಕೊಡುತ್ತಾರೆಯೇ? ಮೋದಿಯವರು ಬಡವರ ಆಶಾಭಾವನೆಗಳನ್ನು ನಾಶಮಾಡಿ ಈ ದೇಶವನ್ನು ಶ್ರೀಮಂತರ ಕೈಗೆ ಕೊಡುತ್ತಿದ್ದಾರೆ. ಇಲ್ಲಿಯವರೆಗೆ, ಅವರು ಎಷ್ಟು ಖರ್ಚು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಲೆಕ್ಕವನ್ನು ತೋರಿಸಿಲ್ಲ, ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಎಲೆಕ್ಟೋರಲ್ ಬಾಂಡ್‌ಗಳಂತೆ ಯಾವುದೇ ಮಾಹಿತಿಗಳಿಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟಿಸ್ ಮದನ್ ಲೋಕೂರ್ ಅವರು ಮಾತನಾಡಿ, ಪಾರದರ್ಶಕತೆ ಇರಬೇಕು. ಖಾಸಗಿ ಟ್ರಸ್ಟ್‌ಗಳೊಂದಿಗೆ ವ್ಯವಹರಿಸುವ ಸಕ್ಷಮ ಪ್ರಾಧಿಕಾರವು ಇದನ್ನು ಈ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article