ಅಲ್ ಕೈದಾ ನಂಟು ಆರೋಪದಲ್ಲಿ ಶಂಕಿತ ಭಯೋತ್ಪಾದಕಿ ಬೆಂಗಳೂರಿನಲ್ಲಿ ಬಂಧನ

Ravi Talawar
ಅಲ್ ಕೈದಾ ನಂಟು ಆರೋಪದಲ್ಲಿ ಶಂಕಿತ ಭಯೋತ್ಪಾದಕಿ ಬೆಂಗಳೂರಿನಲ್ಲಿ ಬಂಧನ
WhatsApp Group Join Now
Telegram Group Join Now

ಅಹಮದಾಬಾದ್, ಜುಲೈ 30: ಅಲ್ ಕೈದಾ  ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸಮಾ ಪರ್ವೀನ್  ಎಂಬಾಕೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ  ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಈಕೆ ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮೂಲಕ ಜಿಹಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಳು ಎಂಬ ಆರೋಪವಿದೆ. ಗುಜರಾತ್ ಎಟಿಎಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಬಂಧಿಸಲಾದ ನಾಲ್ವರು ಭಯೋತ್ಪಾದಕರೊಂದಿಗೆ ಸಮಾ ಪರ್ವೀನ್ ಸಂಪರ್ಕದಲ್ಲಿದ್ದಳು. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಇನ್‌ಸ್ಟಾಗ್ರಾಂ ಗುಂಪಿನಲ್ಲಿ ಸಕ್ರಿಯಳಾಗಿದ್ದಳು ಮತ್ತು ದೇಶ ವಿರೋಧಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಯುವಕರನ್ನು ಜಿಹಾದಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದಳು.

ಸಮಾ ಪರ್ವೀನ್ ಆನ್​​ಲೈನ್ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ತನಿಖೆಯ ಸಮಯದಲ್ಲಿ ಆಕೆಯಿಂದ ವಿವರವಾದ ಪುರಾವೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಎಟಿಎಸ್ ತಿಳಿಸಿದೆ.

 

WhatsApp Group Join Now
Telegram Group Join Now
Share This Article