Ad imageAd image

ಶ್ರೀಲಂಕಾದಲ್ಲಿ ಐಸಿಸ್ ಶಂಕಿತ ಹ್ಯಾಂಡ್ಲರ್‌ ಅರೆಸ್ಟ್

Ravi Talawar
ಶ್ರೀಲಂಕಾದಲ್ಲಿ ಐಸಿಸ್ ಶಂಕಿತ ಹ್ಯಾಂಡ್ಲರ್‌ ಅರೆಸ್ಟ್
WhatsApp Group Join Now
Telegram Group Join Now

ಕೊಲಂಬೊ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀಲಂಕಾದ ಐಸಿಸ್ ಶಂಕಿತ ವಾಂಟೆಡ್ ಹ್ಯಾಂಡ್ಲರ್‌ನನ್ನು ಲಂಕಾ ಪೊಲೀಸ್ ಗುಪ್ತಚರ ದಳ ಶುಕ್ರವಾರ ಬಂಧಿಸಿದೆ. 46 ವರ್ಷದ ಶಂಕಿತ ಓಸ್ಮಾನ್ ಪುಷ್ಪರಾಜ ಗೆರಾರ್ಡ್ಅನ್ನು ಕೊಲಂಬೊದಲ್ಲಿ ಅಪರಾಧ ತನಿಖಾ ಇಲಾಖೆ ಬಂಧಿಸಿದೆ ಎಂದು ಶ್ರೀಲಂಕಾ ಪೊಲೀಸ್ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.

ನಿಷೇಧಿತ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ನಾಲ್ವರು ಶಂಕಿತರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ ನಂತರ, ಶ್ರೀಲಂಕಾ ಪೊಲೀಸ್‌ನ ಪ್ರಮುಖ ಗುಪ್ತಚರ ಶಾಖೆಗಳಾದ ಸಿಐಡಿ, ಭಯೋತ್ಪಾದಕ ತನಿಖಾ ವಿಭಾಗ ಮತ್ತು ಇತರ ಮಿಲಿಟರಿ ಗುಪ್ತಚರ ಸೇವೆಗಳು ಭಾಗವಹಿಸುವಿಕೆಯೊಂದಿಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿತ್ತು.

ಓಸ್ಮಾನ್ ಅಥವಾ ನಾಲ್ವರು ಐಸಿಸ್ ಶಂಕಿತರ ಸುಳಿವು ನೀಡಿದವರಿಗೆ ಶ್ರೀಲಂಕಾ ಪೊಲೀಸರು ಎರಡು ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು. ಇದುವರೆಗೆ ಭಾರತದಲ್ಲಿ ಬಂಧಿತ ನಾಲ್ವರೊಂದಿಗೆ ಸಂಪರ್ಕ ಹೊಂದಿದ್ದ ಹ್ಯಾಂಡ್ಲರ್ ಸೇರಿದಂತೆ ಆರು ಶಂಕಿತರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

ISIS ಲಾಂಛನದೊಂದಿಗೆ ಧ್ವಜವನ್ನು ಸಿದ್ಧಪಡಿಸಿದ ಶಂಕಿತ ವ್ಯಕ್ತಿ ಭಾರತಕ್ಕೆ ಹೋಗಲು ಯೋಜಿಸಿದ್ದ. ಆದರೆ ನಂತರ ನಿರಾಕರಿಸಿದ. ಇತರ ಇಬ್ಬರನ್ನು ತಮ್ಮ ಗ್ರೂಪ್​ಗೆ ಸೇರ್ಪಡೆಗೊಳ್ಳುವಂತೆ ಮಾಡಿದ.

WhatsApp Group Join Now
Telegram Group Join Now
Share This Article