ಬೆಂಗಳೂರು, (ಸೆಪ್ಟೆಂಬರ್ 26): ಹಲವು ಗೊಂದಗಳ ನಡುವೆಯೂ ಕರ್ನಾಟಕದಲ್ಲಿ ಜಾತಿಗಣತಿ ಐದನೇ ದಿನಕ್ಕೆ ಕಾಲಿಟ್ಟಿದೆ. ನಿಯೋಜನೆಗೊಂಡಿರುವ ಶಿಕ್ಷಕರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಕೆಲವೆಡೆ ಇಂಟರ್ ನೆಟ್, ಸರ್ವರ್ ಸಮಸ್ಯೆಗಳ ನಡೆಯೂ ಶಿಕ್ಷಕರು ನಾನಾ ಕಸರತ್ತು ಮಾಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಸೆಪ್ಟೆಂಬರ್ 26) ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಈವರೆಗೆ ರಾಜ್ಯಾದ್ಯಂತ ಕೇವಲ ಶೇ.4ರಷ್ಟು ಮಾತ್ರ ಸರ್ವೇ ಆಗಿದೆ ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಇವತ್ತು ಡಿಸಿಗಳು, ಸಿಇಒಗಳ ಜೊತೆ ವಿಡಿಯೋ ಸಂವಾದ ಮಾಡಿದ್ದೇವೆ. ಸರ್ವೇ ಕಾರ್ಯ ಕುಂಠಿತ ಆಗಿತ್ತು. ತಾಂತ್ರಿಕ ಸಮಸ್ಯೆ ಗಳು ಎಲ್ಲಾ ಡಿಸಿ ಹೇಳೋ ಪ್ರಕಾರ 90ರಷ್ಟು ರಷ್ಟು ಪರಿಹಾರ ಆಗಿದ್ದಾವೆ. ಉಳಿದಿರೋ ಸಮಸ್ಯೆ ಇಂದೇ ಪರಿಹಾರ ಆಗುತ್ತದೆ. ನಾನು ಕಮಿಷನರ್ ಅವರಿಗೂ ಹೇಳಿದ್ದೇನೆ, ಕಾರ್ಯದರ್ಶಿ ಗೂ ಹೇಳಿದ್ದೇನೆ. ಏನೇನು ತೊಡಕು ಇದ್ದಾವೆ ಅದನ್ನ ನಿವಾರಣೆ ಮಾಡಬೇಕು. ನಿವಾರಣೆ ಆಗುತ್ತದೆ ಎಂದ ಹೇಳಿದ್ದಾರೆ. ಸಮಸ್ಯೆ ಬಗೆ ಹರಿಯುತ್ತದೆ. ಇಂದಿನಿಂದ ಸರ್ವೇ ಕೆಲಸ ಚುರುಕಾಗಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೆ 22ರಿಂದ ಅಕ್ಟೋಬರ್ ವರೆಗೆ ಸರ್ವೇ ಕೆಲಸ ಮುಗೀಬೇಕು ಅಂತ ತೀರ್ಮಾನ ಮಾಡಿದ್ವಿ. ಆಯೋಗ ಕೂಡ ತೀರ್ಮಾನ ಮಾಡಿತ್ತು. ಆದ್ರೆ ನಾಲ್ಕು ದಿನ ಸರ್ವೇ ಸರಿಯಾಗಿ ನಡೆದಿಲ್ಲ. ಉಳಿದಿರೋ ದಿನಗಳಲ್ಲಿ ಅದನ್ನ ಕವರ್ ಮಾಡಬೇಕು. ಪ್ರತೀ ದಿನ ಶೇ.10ರಷ್ಟು ಹೌಸ್ ಹೋಲ್ಡ್ ಸರ್ವೇ ಅಗಬೇಕು.ನಾವು ಮಾಡುತ್ತೇವೆ ಎಂದು ಎಲ್ಲಾ ಡಿಸಿ ಒಪ್ಪಿಕೊಂಡಿದ್ದಾರೆ. ಶಿಕ್ಷಕರು ಕೆಲ ತಪ್ಪು ಕಲ್ಪನೆಗಳಿಂದ ಸಮಸ್ಯೆ ಆಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಇದ್ದಾರೆ. ಎಲ್ಲರೂ ಕೂಡ ಒಪ್ಪಿಕೊಂಡು ಸರ್ವೇ ಕೆಲಸ ಶುರು ಮಾಡಿದ್ದಾರೆ ಎಂದು ತಿಳಿಸಿದರು.