ಬೆಳಗಾವಿ: ಹಿರಿಯ ನಾಗರಿಕರು ಸಮಾಜದ ಮಾರ್ಗದರ್ಶಕರು. ಅವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಬದುಕು ನಡೆಸಬೇಕು. ನಮ್ಮ ಫೌಂಡೇಶನ್ ದಿಂದ ಕೂಡ ನಿಮಗೆ ಬೇಕಾದ ಸಹಾಯ- ಸಹಕಾರ ಮಾಡಲಾಗುವುದು ಎಂದು ಸುರೇಶ ಯಾದವ ಪೌoಡೇಶನ್ ಅಧ್ಯಕ್ಷ ಸುರೇಶ್ ಯಾದವ ಅವರು ಭರವಸೆ ನೀಡಿದರು.
ಇಲ್ಲಿನ ರಾಮತೀರ್ಥ ನಗರದ ಸಮುದಾಯ ಭವನದಲ್ಲಿ
ಹಿರಿಯ ನಾಗರಿಕರ ಸಭೆಯಲ್ಲಿ ಅಖಿಲ ಭಾರತ ಹಿರಿಯ ನಾಗರಿಕರ ಮಹಾಸಂಗದ ಉಪಾಧ್ಯಕ್ಷರಾದ ಎಂವಿ ಹಿರೇಮಠ ಅವರೊಂದಿಗೆ ಹಿರಿಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅವರು ಮಾತನಾಡಿದರು.
ಹಿರಿಯರು ಮುಗ್ದ ಮನಸ್ಸಿನ, ಮೃದು ಸ್ವಭಾವದವರು , ಹೀಗಾಗಿ ನಮ್ಮ ರಾಮತೀರ್ಥನಗರದ ಹಿರಿಯರ ಸಮಸ್ಯೆ ಗಳು ಶೀಘ್ರದಲ್ಲೇ ಪರಿಹಾರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹಿರಿಯ ನಾಗರಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಅವರಲ್ಲಿರುವ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು. ಸಮಾಜಕ್ಕಾಗಿ ಒಂದಿಷ್ಟು ಸೇವೆ ಮಾಡಬಹುದು ಆದರೆ, ಹಿರಿಯರ ಸೇವೆ ಎಂದಿಗೂ ಅಪಾರವಾದದ್ದು. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದು ಹೇಳಿದರು.
ರಾಜ್ಯಾದಕ್ಷರಾದ ಎ ವೈ ಬೆಂಡಿಗೇರಿ ಅವರು ಮಾತನಾಡಿ, ಸರಕಾರ ದಿಂದ ಸಿಗುವ ಸೌಲತ್ತುಗಳನ್ನು ತಮಗೆ ಸಿಗಲು ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದು ತಮಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.
ಹಿರಿಯ ನಾಗರಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಚರ್ಚಿಸಿ ಸಂಘಟಿತರಾಗಿ ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಸುವ ಕೆಲಸ ನನ್ನದು ಎಂದು ಹೇಳಿದರು.
ಈ ಸಭೆಯಲ್ಲಿ ರಾಮ್ ತೀರ್ಥ ನಗರವಾಸಿ ಸಂಘದ ಅಧ್ಯಕ್ಷರಾದ ನಿರ್ವಾಣಿ , ಕಾರ್ಯದರ್ಶಿಗಳಾದ ಮುದುಕಬಿ , ಜಿಲ್ಲಾಧ್ಯಕ್ಷರು ಕೆಂಚರೋತ , ಕುಮಾರಸ್ವಾಮಿ ಲೇಔಟ್ ಹಿರಿಯ ನಾಗರೀಕರ ಅಧ್ಯಕ್ಷರಾದ ವಿರೂಪಾಕ್ಷಯ್ಯ ನಿರಲಗಿಮಠ ಹಾಗೂ ಇತರರು ಇದ್ದರು.


