ಮೂಡಲಗಿ : ಸುರಕ್ಷಾ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್, ೨೦೦೬ರಲ್ಲಿ ತಾಲೂಕಿನಲ್ಲೇ ಪ್ರಪ್ರಥಮವಾಗಿ ಪ್ರಾರಂಭವಾದ ಡಿ.ಎಮ್.ಎಲ್.ಟಿ ಕಾಲೇಜು ಎಂಬ ಹೆಗ್ಗಳಿಕೆ ಪಡೆಯುವುದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ ರೂಪಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಮೂಡಲಗಿಯ ಸುರಕ್ಷಾ ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಡಾ.ಎಸ್.ಎಸ್.ಪಾಟೀಲ್ ಹೇಳಿದರು.
ಶನಿವಾರದಂದು ಪಟ್ಟಣದ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಈಗಾಗಲೇ ಪ್ರತಿಷ್ಠಿತ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್ ಟೇಕ್ನಿಶಿಯನ್ಸ್ ಆಗಿ ಸೇವೆ ಸಲ್ಲಿಸುತ್ತ ತಮ್ಮ ಭವಿಷ ಕಟ್ಟಿಕೊಂಡಿದ್ದಾರೆ, ಸಮಾಜಕ್ಕೆ ಒಳ್ಳೆಯ ವಿದ್ಯಾರ್ಥಿಗಳನ್ನು ಕೊಡುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಶಶಿರೇಖಾ ಬೆಳ್ಳಕ್ಕಿ ಮತ್ತು ಡಾ.ಅನೀಲ್ ಪಾಟೀಲ್ ಮಾತನಾಡಿ, ಸಾಧನೆ ಯಾರೊಬ್ಬರ ಸ್ವತ್ತಲ್ಲ, ವಿದ್ಯಾರ್ಥಿ ಜೀವನ ಅತ್ಯಂತ ಮೌಲ್ಯಯುತವಾಗಿದ್ದು ಶಿಕ್ಷಣದ ಜೊತೆ ತಾಳ್ಮೆ, ಶಿಸ್ತು,, ವಿನಯತೆ ಮತ್ತು ಸಮಯಪ್ರಜ್ಞೆಯನ್ನು ಕೂಡ ಕಲಿತು ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಬೇಕೆಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೆಂಕಟೇಶ್ ಸೋನವಾಲ್ಕರ ಮತ್ತು ಈಶ್ವರ ಕಂಬಾರ ಮಾತನಾಡಿ ಮೂಡಲಗಿಯಲ್ಲಿ ಡಿ.ಎಂ.ಎಲ್.ಟಿ ಕಾಲೇಜು ಇರುವುದರಿಂದ ಸುತ್ತಲಿನ ಹಲವು ಹಳ್ಳಿಗಳ ವಿದ್ಯಾರ್ಥಿಗಳಿಗೆ ಲ್ಯಾಬ್ ಟೇಕ್ನಿಶಿಯನ್ ಆಗಿ ತಮ್ಮ ಭವಿಷ ರೂಪಿಸಿಕೊಳ್ಳಲು ಸಹಾಯವಾಗಿದ್ದು, ಸುರಕ್ಷಾ ಪ್ಯಾರಾ ಮೆಡಿಕಲ್ ಸಂಸ್ಥೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭಹಾರೈಸಿದರು.ಸಂಸ್ಥೆಯ ಕಾರ್ಯದರ್ಶಿ ಸಂಗೀತಾ ಎಸ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಗಳಾದ ಸಿ.ಏನ್.ಹೂಗಾರ್ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ, ಮಾಜಿ ಜಿ.ಪಂ.ಸದಸ್ಯ ಭೀಮಶಿ ಮಗದುಮ್, ಮುಖಂಡರಾದ ಈರಪ್ಪ ವಾಲಿ, ಹನಮಂತ ಗುಡ್ಲಮನಿ, ಪ್ರಕಾಶ್ ಈರಪ್ಪನವರ, ಶಿಕ್ಷಕರಾದ ಉಮೇಶ್ ದಳವಾಯಿ, ವಿಜಯಲಕ್ಷ್ಮೀ.ಎ.ಪಾಟೀಲ್, ಪ್ರಾಂಶುಪಾಲರಾದ ವರ್ಧಮಾನ್ ಜರಾಳೆ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


