ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್‌ ಆರೋಪ; ಪಿಐಎಲ್‌ ವಜಾಗೊಳಿಸಿದ ಸುಪ್ರೀಂ

Ravi Talawar
ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್‌ ಆರೋಪ; ಪಿಐಎಲ್‌ ವಜಾಗೊಳಿಸಿದ ಸುಪ್ರೀಂ
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್​ 26: ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ ಕರ್ನಾಟಕ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದಂತೆ ಲಾಯರ್​ ವಿನಯ್ ಕುಮಾರ್ ಸಿಂಗ್​​ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಸುಪ್ರೀಂಕೋರ್ಟ್​​ ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ನೀವು ಜಾರ್ಖಂಡ್​​ನವರು ನಿಮಗೇನು ಸಂಬಂಧ? ಪೊಲಿಟಿಕಲ್ ನಾನ್​ಸೆನ್ಸ್​ಗಳನ್ನೆಲ್ಲಾ ವಿಚಾರಣೆ ಮಾಡಲು ಆಗಲ್ಲ. ಜಡ್ಜ್​ಗಳು ಏಕೆ ಹನಿಟ್ರ್ಯಾಪ್​​ಗೆ ಒಳಗಾಗುತ್ತಾರೆ, ಅದನ್ನು ಜಡ್ಜ್​ಗಳು ನೋಡಿಕೊಳ್ಳುತ್ತಾರೆ ನಿಮಗೇನು ಸಂಬಂಧ ಎಂದು ಸುಪ್ರೀಂ ಪ್ರಶ್ನೆ ಮಾಡಿದ

ಬಗ್ಗೆ ಇಂದು ಸುಪ್ರೀಂಕೋರ್ಟ್ ವಿಚಾರಣೆ ಮಾಡಿದೆ. ಹಿರಿಯ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ನ್ಯಾಯಾಧೀಶರ ಹನಿಟ್ರ್ಯಾಪ್​​ ಆರೋಪಗಳ ಬಗ್ಗೆ ಅರ್ಜಿದಾರರು ವಾದವನ್ನು ಮಂಡಿಸಿದರು. ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್ ಲಾಯರ್​ ವಿನಯ್ ಕುಮಾರ್ ಸಿಂಗ್​​ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

WhatsApp Group Join Now
Telegram Group Join Now
Share This Article